ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಹೇರಲಾಗಿದ್ದು, ಸದ್ಯಕ್ಕೆ ಯಾವುದೇ ಚಿತ್ರಮಂದಿರಗಳು ತೆರೆಯುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಬೇಕಿದ್ದ ಕಾಲಿವುಡ್ ನಟ ಧನುಷ್ ಅವರ ಬಹುನಿರೀಕ್ಷಿತ ‘ಜಗಮೇ ತಂಧಿರಮ್’ ಇದೀಗ ಒಟಿಟಿ ಮುಖಾಂತರ ಬಿಡುಗಡೆಯಾಗುತ್ತಿದೆ.

ಲಾಕ್‌ಡೌನ್ ಕಾರಣದಿಂದ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾ ಇದೀಗ ಜೂನ್ 18ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಒಟಿಟಿಯಲ್ಲಿ ಧನುಷ್ ಸಿನಿಮಾ ಬಿಡುಗಡೆಯಾಗುತ್ತಿರುವುದು ಇದೇ ಮೊದಲಾಗಿದೆ. ಚೆನ್ನೈ ಮೂಲದ ವೈನಾಟ್ ಸ್ಟುಡಿಯೋಸ್ ಮತ್ತು ರಿಲಯನ್ಸ್ ಎಂಟರ್ಟೈನ್ಮೆಂಟ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಖ್ಯಾತ ಇಂಗ್ಲಿಷ್‌ಷ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ನ ನಟ ಜೇಮ್ಸ್ ಕೋಸ್ಮೋ, ಖ್ಯಾತ ಮಲಯಾಳಂ ನಟ ಜೋಜಿ ಜಾರ್ಜ್, ಐಶ್ವರ್ಯ ಲಕ್ಷ್ಮಿ, ಕಲೈಅರಸನ್ ಶರತ್ ರವಿ ತಾರಾಗಣದಲ್ಲಿದ್ದಾರೆ.

‘ಈ ಸಿನಿಮಾವನ್ನು ಹಿಂದಿ, ತೆಲುಗು, ಕನ್ನಡಕ್ಕೂ ಡಬ್ ಮಾಡಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಿದ್ದೇವೆ. ಧನುಷ್ ತಮ್ಮ ಪಾತ್ರದ ಮೂಲಕ ವಿಭಿನ್ನವಾಗಿ ತೆರೆಮೇಲೆ ಕಾಣಿಸುತ್ತಾರೆ’ ಎನ್ನುತ್ತಾರೆ ನಿರ್ದೇಶಕ ಕಾರ್ತಿಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.