ಭಾನುವಾರ, ಮೇ 29, 2022
21 °C

ತೆಲುಗಿನ ಹೊಸ ಚಿತ್ರ: ’ಸರ್‌’ ಆದ ತಮಿಳು ನಟ ಧನುಷ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಧನುಷ್‌ ಹೊಸ ತಮಿಳು ಹಾಗೂ ತೆಲುಗು ಭಾಷೆ ಸಿನಿಮಾದಲ್ಲಿ ನಟಿಸುವ ಘೋಷಣೆ ಮಾಡಿದ್ದಾರೆ. 

ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇದಕ್ಕೆ ತಮಿಳಿನಲ್ಲಿ ‘ವಾತಿ’ ಹಾಗೂ ತೆಲುಗಿನಲ್ಲಿ ‘ಸರ್’ ಎಂದು ಹೆಸರಿಡಲಾಗಿದೆ. ಧನುಷ್‌ ಅವರು ಸಿನಿಮಾದ ಪೋಸ್ಟರ್​ಗಳು ಹಾಗೂ ಟೈಟಲ್‌ ಟೀಸರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಧನುಷ್‌ ಅವರ ನೂತನ ಸಿನಿಮಾಗೆ ಅಭಿಮಾನಿಗಳು, ಗೆಳೆಯರು, ಉದ್ಯಮಿಗಳು ಹಾಗೂ ಸಿನಿರಂಗದ ಗಣ್ಯರು ಶುಭ ಹಾರೈಸಿದ್ದಾರೆ. 

ಸೂರ್ಯದೇವ ನಾಗ ವಂಶಿ ಹಾಗೂ ಸೌಜನ್ಯ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ವೆಂಕಿ ಅಟ್ಲುರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಿಕ್ಷಣ ಕುರಿತಾದ ಈ ಸಿನಿಮಾ ಸಾಮಾನ್ಯ ವ್ಯಕ್ತಿಯ ಮಹತ್ವಾಕಾಂಕ್ಷೆಯನ್ನು ಹೇಳುತ್ತದೆ ಎಂದು ಚಿತ್ರತಂಡ ಹೇಳಿದೆ.

ಧನುಷ್‌ಗೆ ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ. ಜಿವಿ ಪ್ರಕಾಶ್​ ಕುಮಾರ್​ ಸಂಗೀತ ಸಂಯೋಜನೆ ಮಾಡುತ್ತಿದ್ದು, ದಿನೇಶ್​ ಕೃಷ್ಣನ್​ ಕ್ಯಾಮೆರಾ ವರ್ಕ್‌ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಜನವರಿಯಲ್ಲಿ ನಡೆಯಲಿದೆ.

READ: 

ಧನುಷ್  ನಟಿಸಿರುವ ​‘ಅತರಂಗಿ ರೇ’ ಬಾಲಿವುಡ್‌ ಸಿನಿಮಾ ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ. ಈಗಾಗಲೇ ಧನುಷ್‌ ಮಲಯಾಳಂ, ಬಾಲಿವುಡ್‌ ಹಾಗೂ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

READ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು