ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

ಸಂಗೀತ ಸಂತ ಇಳಯರಾಜ ಅವರ ಬಯೋಪಿಕ್‌ 2025ರ ವೇಳೆಗೆ ತೆರೆಗೆ ಬರಲಿದೆ.
Published 10 ನವೆಂಬರ್ 2023, 11:15 IST
Last Updated 10 ನವೆಂಬರ್ 2023, 11:15 IST
ಅಕ್ಷರ ಗಾತ್ರ

ಚೆನ್ನೈ(ತಮಿಳುನಾಡು): ಸಂಗೀತ ಮಾಂತ್ರಿಕ ಇಳಯರಾಜ ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ಸಿದ್ದತೆ ನಡೆದಿದೆ. ಇಳಯರಾಜ ಪಾತ್ರದಲ್ಲಿ ತಮಿಳು ಸೂಪರ್‌ಸ್ಟಾರ್ ನಟ ಧನುಷ್ ಬಣ್ಣ ಹಚ್ಚಲಿದ್ದಾರೆ.

‘ಈ ಬಯೋಪಿಕ್‌ನ ಶೀರ್ಷಿಕೆಯನ್ನು ಇನ್ನೂ ಘೋಷಿಸಿಲ್ಲ. 2024ರಲ್ಲಿ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ' ಎಂದು ಸಿನಿಮಾ ಟ್ರೇಡ್ ವಿಶ್ಲೇಷಕ ಮನೋಬಲ ವಿಜಯಬಾಲನ್ ತಿಳಿಸಿದ್ದಾರೆ.

'ಇಳಯರಾಜ ಅವರ ಜೀವನವನ್ನು ಆಧರಿಸಿದ ಬಹು ನಿರೀಕ್ಷಿತ ‌ಬಯೋಪಿಕ್‌ನಲ್ಲಿ ನಟ ಧನುಷ್ ಅಭಿನಯಿಸಲಿದ್ದಾರೆ. 2025ರ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ' ಎಂದು ಮನೋಬಲ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ಅವರು ಇಳಯರಾಜ ಜತೆಗಿನ ಧನುಷ್ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಇಳಯರಾಜ ಅವರ ಬಗ್ಗೆ ಒಂದಿಷ್ಟು..:

ಭಾರತದ ಶ್ರೇಷ್ಠ ಸಂಗೀತ ಸಂಯೋಜಕರಲ್ಲಿ ಒಬ್ಬರಾದ ಇಳಯರಾಜ ಅವರು ಐದು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಗಳ 7 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಪ್ರಪಂಚದಾದ್ಯಂತ 20 ಸಾವಿರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ತಮ್ಮ ವೃತ್ತಿಜೀವನದ ಅಮೋಘ ಸಾಧನೆಗಾಗಿ 2012ರಲ್ಲಿ 'ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ'ಯನ್ನು ಪಡೆದಿದ್ದಾರೆ. ಅಲ್ಲದೇ 2010ರಲ್ಲಿ ಪದ್ಮಭೂಷಣ ಮತ್ತು 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT