ಶುಕ್ರವಾರ, ಏಪ್ರಿಲ್ 23, 2021
30 °C
ಫಿಲ್ಮ್‌ ಚೇಂಬರ್‌ಗೆ ಮುತ್ತಿಗೆ

‘ಪೊಗರು’ ಈಗ ದ್ರುವ ಸರ್ಜಾ ಅಭಿಮಾನಿಗಳ ಸರದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೊಗರು’ ಚಿತ್ರದ ವಿವಾದಿತ ದೃಶ್ಯ ಸಂಬಂಧಿಸಿ ನಿರ್ದೇಶಕರೇ ಕ್ಷಮೆ ಕೇಳಿದ್ದರೂ ಚಿತ್ರದ ಪುಟ್ಟ ತುಣುಕು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ದ್ರುವ ಸರ್ಜಾ ಅಭಿಮಾನಿಗಳು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದರು.

ಸಿನಿಮಾ ಸಂಬಂಧಿಸಿದ ವಿವಾದಗಳೆಲ್ಲಾ ಮುಗಿದಿವೆ. ಆದರೆ ಯೂಟ್ಯೂಬರ್‌ ಚಿರುಭಟ್‌ ಎಂಬುವವರು ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಮಂಡಳಿಯ ಕಾರ್ಯದರ್ಶಿ ಎನ್‌.ಎಂ. ಸುರೇಶ್‌ ಅವರು ಚಿರು ಭಟ್‌ ಅವರಿಗೆ ಕರೆ ಮಾಡಿದ್ದಾರೆ. ಮಾತುಕತೆ ಮುಂದುವರಿದಿದೆ.

ಚಿರುಭಟ್‌ ಅವರ ಯುಟ್ಯೂಬ್‌ ಚಾನೆಲ್‌ನಲ್ಲಿ ದ್ರುವ ಸರ್ಜಾ ಅಭಿಮಾನಿ ಶೇಖರ್‌ ಮತ್ತು ಚಿರು ಭಟ್‌ ಅವರ ವಾಗ್ವಾದದ ಆಡಿಯೋ ಹರಿದಾಡುತ್ತಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು