ಸೋಮವಾರ, ಡಿಸೆಂಬರ್ 5, 2022
27 °C

ಹೆಣ್ಣು ಮಗುವಿನ ತಂದೆಯಾದ ಸಂಭ್ರಮದಲ್ಲಿ ಧ್ರುವ ಸರ್ಜಾ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಮಗಳು ಜನಿಸಿದ ಖುಷಿಯಲ್ಲಿದ್ದಾರೆ. ಅವರ ಪತ್ನಿ ಪ್ರೇರಣಾ ಶಂಕರ್ ಭಾನುವಾರ ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಮಹಾಲಕ್ಷ್ಮಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಧ್ರುವ ಸರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಪತ್ನಿ ಪ್ರೇರಣಾಗೆ ನಾರ್ಮಲ್ ಡೆಲಿವರಿಯಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

'ನಮ್ಮ ಅಣ್ಣನ ಮಗ ನನಗೂ ಮಗ. ಹೀಗಾಗಿ ನಮಗೆ ಮಗಳು ಬೇಕು. ಈ ಖುಷಿಯನ್ನು ನೋಡಲು ಅಣ್ಣ ಇರಬೇಕಿತ್ತು’ ಎಂದು ಈ ಹಿಂದೆ ಧ್ರುವ ಸರ್ಜಾ ಹೇಳಿದ್ದರು. ಅಣ್ಣ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಧ್ರುವ ಸರ್ಜಾ ಅವರನ್ನು ಬಹಳ ಕಾಡಿದೆ. ಹೀಗಾಗಿ ಅವರು ಮಗುವಿನ ಖುಷಿಯಲ್ಲೂ ಅಣ್ಣನ ಅಗಲಿಕೆ ನೋವು ತೋಡಿಕೊಂಡಿದ್ದರು.

ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರದ್ದು ಪ್ರೇಮ ವಿವಾಹ. ಪಕ್ಕದ ಮನೆಯಲ್ಲಿಯೇ ಇರುವ ಪ್ರೇರಣಾ ಅವರನ್ನು ಧ್ರುವಾ 2019ರ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಬಹಳ ಆಲೋಚಿಸಿ ಕಥೆಗಳನ್ನು ಆಯ್ದುಕೊಳ್ಳುವ ಧ್ರುವ ಅವರ ಮಾರ್ಟಿನ್‌ ಚಿತ್ರ ಚಿತ್ರೀಕರಣ ಹಂತದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು