ಬೆಂಗಳೂರು: ಇಲ್ಲಿನ ಜೆ.ಪಿ. ನಗರದ ಸಂಸ್ಕೃತ ಬೃಂದಾವನ ಕನ್ವೆಷನ್ ಹಾಲ್ನಲ್ಲಿ ಭಾನುವಾರ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಸಪ್ತಪದಿ ತುಳಿದರು.

ಬೆಳಿಗ್ಗೆ 7.15 ರಿಂದ 7.45ರ ವೃಶ್ಚಿಕ ಶುಭ ಲಗ್ನದಲ್ಲಿ ಈ ಇಬ್ಬರೂ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ತಿರುಪತಿ ವೆಂಕಟೇಶ್ವರ ಥೀಮ್ನಲ್ಲಿ ಮದುವೆ ಮಂಟಪ ಅಲಂಕೃತಗೊಂಡಿತ್ತು. ಬ್ಯಾಕ್ ಡ್ರಾಪ್ ನಲ್ಲಿ ಶಿವ-ಪಾರ್ವತಿ, ಗಣಪ ಮಂಟಪಗಳನ್ನು ನಿರ್ಮಿಸಲಾಗಿತ್ತು.

ಮೊದಲಿಗೆ ಸೋದರ ಮಾವನ ಕೈಯಲ್ಲಿ ವಧುವಿಗೆ ಕಂಕಣ ಧಾರಣೆ ಮಾಡಲಾಯಿತು. ಬಳಿಕ ವರನಿಗೆ ಸೋದರ ಮಾವನಿಂದ ಕಂಕಣ ಧಾರಣೆ ಮಾಡಿಸಲಾಯಿತು. 18 ಪುರೋಹಿತರು ಮದುವೆ ಶಾಸ್ತ್ರಗಳನ್ನು ನಡೆಸಿಕೊಟ್ಟರು. ಗೋಪೂಜೆಗಾಗಿ ಐದು ಹಸುಗಳನ್ನು ತರಿಸಲಾಗಿತ್ತು. ಎರಡು ಕುಟುಂಬದ ಸದಸ್ಯರು, ಧ್ರುವ ಅವರ ಅಭಿಮಾನಿಗಳು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.