ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವು 3 ಗಂಟೆ 55 ನಿಮಿಷಗಳ ಸುಧೀರ್ಘ ಪ್ರದರ್ಶನ ಇರಲಿದೆ ಎಂದು ವರದಿಯಾಗಿದೆ.

ಆಧಿತ್ಯ ಧರ್ ನಿರ್ದೇಶನದ ಧುರಂಧರ್: ದಿ ರಿವೆಂಜ್ ಸಿನಿಮಾ ಐತಿಹಾಸಿಕ ಘಟನೆ ಆಧಾರಿತ ಚಿತ್ರವಾಗಿದ್ದು, ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ. ಈ ಸಿನಿಮಾ ಆಧಿತ್ಯ ಧರ್ ಅವರ ಬಹುಡೊಡ್ಡ ಹಾಗೂ ನಿರೀಕ್ಷಿತ ಸಿನಿಮಾವಾಗಿದ್ದು, ಸುಮಾರು 4 ಗಂಟೆಯ ಚಿತ್ರವಾಗಿದೆ.
.ನಿಷೇಧವಿದ್ದರೂ ಪಾಕಿಸ್ತಾನದಲ್ಲಿ ಸಿಗುತ್ತಿದೆ ಧುರಂಧರ್ ಸಿನಿಮಾದ ನಕಲಿ ಪ್ರತಿ.ಮಾರ್ಚ್ 19ಕ್ಕೇ ‘ಧುರಂಧರ್: ದಿ ರಿವೇಂಜ್’ .
ಸಿನಿಮಾದ ಚಿತ್ರಕಥೆ ಹೆಚ್ಚು ಉದ್ದವಾಗಿರುವುದರಿಂದ ಪ್ರೇಕ್ಷಕರಿಗೆ ಸಿನಿಮಾ ಬೋರ್ ಆಗುವ ಸಾಧ್ಯತೆ ಇದ್ದು, ಸಿನಿಮಾ ಪ್ರದರ್ಶನದ ಮೇಲೆ ಪರಿಣಮ ಉಂಟಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವರದಿಗಳ ಪ್ರಕಾರ, ಧುರಂಧರ–2 ಸಿನಿಮಾ ಇತ್ತೀಚೆಗೆ ಹೆಚ್ಚು ವಿಕ್ಷಣೆ ಪಡೆದಕೊಂಡ ಟೀಸರ್ಗಳಲ್ಲಿ ಒಂದಾಗಿದೆ.

ಸಿನಿಮಾದ ಟೀಸರ್ ನೋಡಿರುವ ಪ್ರೇಕ್ಷಕರು ಈ ಸಿನಿಮಾ ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಮೀರಿಸಿ ಹೊಸ ದಾಖಲೆ ಬರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳ ನಡುವೆ ಭಾರೀ ಪೈಪೋಟಿ ನಡೆಯಲಿದೆ.

ಧುರಂಧರ್ ಮೊದಲ ಭಾಗವು 2025ರ ಡಿಸೆಂಬರ್ 5ರಂದು ತೆರೆಕಂಡಿತ್ತು. ವಿಶ್ವದಾದ್ಯಂತ ₹1300 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಈ ಸಿನಿಮಾ ಇತ್ತೀಚೆಗಷ್ಟೇ ನೆಟ್ಪ್ಲಿಕ್ಸ್ನಲ್ಲಿ ಬಿಡುಗಡೆಗೊಂಡಿದೆ. ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್.ಮಾಧವನ್ ಮತ್ತು ರಾಕೇಶ್ ಬೇಡಿ ನಟಿಸಿರುವ ಈ ಸಿನಿಮಾದ ಮೊದಲ ಭಾಗ ಅಕ್ಷಯ್ ಖನ್ನಾ ಅವರು ನಿಭಾಯಿಸಿದ 'ರೆಹಮಾನ್ ಡಕಾಯತ್' ಪಾತ್ರದ ಸಾವಿನೊಂದಿಗೆ ಕೊನೆಗೊಂಡಿತ್ತು.
.‘ಈ ಸಲ ಯುದ್ಧನೇ ಬೇರೆ’; ಟೀಸರ್ ಮೂಲಕ ಧುರಂಧರ್ 2ಗೆ ಎಚ್ಚರಿಕೆ ಕೊಟ್ರಾ ಯಶ್?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.