ಗುರುವಾರ , ಮಾರ್ಚ್ 30, 2023
24 °C

ಮೊದಲ ಮಗುವಿನ ಸಂಭ್ರಮದಲ್ಲಿ ನಟಿ ದಿಯಾ ಮಿರ್ಜಾ, ಉದ್ಯಮಿ ವೈಭವ್‌ ರೇಖಿ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟಿ ದಿಯಾ ಮಿರ್ಜಾ ಮತ್ತು ಉದ್ಯಮಿ ವೈಭವ್ ರೇಖಿ ದಂಪತಿ ಮೊದಲ ಮಗುವಿನ ಸಂಭ್ರಮದಲ್ಲಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿರುವ ದಿಯಾ ಮಿರ್ಜಾ ಅವರು ಈ ವಿಚಾರವನ್ನು ಬುಧವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಗುವಿನ ಬೆರಳನ್ನು ಸ್ಪರ್ಶಿಸುತ್ತಿರುವ ಚಿತ್ರ ಮತ್ತು ಹಸ್ತಾಕ್ಷರಗಳಿರುವ ಟಿಪ್ಪಣಿಯೊಂದನ್ನು ಟ್ವೀಟ್‌ ಮಾಡುವ ಮೂಲಕ ದಿಯಾ ಮಿರ್ಜಾ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮೇ 14ರಂದು ಜನಿಸಿದ ಮಗುವಿಗೆ ಅವ್ಯಾನ್‌ ಆಜಾದ್‌ ರೇಖಿ ಎಂಬುದಾಗಿ ನಾಮಕರಣ ಮಾಡಲಾಗಿದೆ ಎಂದು ದಿಯಾ ಮಿರ್ಜಾ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.

ಬಾಲಿವುಡ್‌ ನಟಿ ದಿಯಾ ಮಿರ್ಜಾ ಅವರು ಉದ್ಯಮಿ ವೈಭವ್‌ ರೇಖಿ ಅವರೊಂದಿಗೆ ಇದೇ ವರ್ಷದ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ. ದಿಯಾ ಮತ್ತು ಚಿತ್ರ ನಿರ್ಮಾಪಕ ಸಾಹಿಲ್‌ ಸಂಘಾ ಅವರ ದಾಂಪತ್ಯ 11 ವರ್ಷಗಳ ಬಳಿಕ 2019ರಲ್ಲಿ ಅಂತ್ಯವಾಗಿತ್ತು. ವೈಭವ್‌ ರೇಖಿ–ಸುನೈನಾ ರೇಖಿ ದಂಪತಿ ಸಹ ಇದೀಗ ಬೇರೆಯಾಗಿದ್ದು, ಒಬ್ಬಳು ಮಗಳಿದ್ದಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು