‘ದಿಯಾ ಈಗಾಗಲೇ ಜನರ ಮನಗೆದ್ದಿದೆ. ಅವರ ಬೇಡಿಕೆ ಮೇರೆಗೆ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆಯೇ ವಿನಃ ಬೇರೇನೂ ನಿರೀಕ್ಷೆ ಇಲ್ಲ...’

ಹೀಗೆಂದು ಚಿತ್ರದ ನಿರ್ದೇಶಕ ಕೆ.ಎಸ್. ಅಶೋಕ್ ‘ಪ್ರಜಾಪ್ಲಸ್’ ಜೊತೆ ಮಾತಿಗಿಳಿದರು.

ಅ. 15ರಿಂದ ಚಿತ್ರಮಂದಿರಗಳು ತೆರೆದಿವೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರಗಳನ್ನು ಪ್ರಾಯೋಗಿಕವಾಗಿ ಮರು ಪ್ರದರ್ಶನಮಾಡಲಾಗುತ್ತಿದೆ. ದಿಯಾ ಕೂಡಾ ಅ. 23ರಿಂದ ಮರುಪ್ರದರ್ಶನಗೊಳ್ಳುತ್ತಿದೆ.

‘ದಿಯಾ ಚಿತ್ರದಲ್ಲಿ ಮೊದಲು ಹಾಡುಗಳಿರಲಿಲ್ಲ. ‘ಸೋಲ್ ಆಫ್ ದಿಯಾ’ ಎಂಬ ಹಾಡನ್ನು ಪರಿಚಯಾತ್ಮಕವಾಗಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದೆವು. ಈಗ ಆ ಹಾಡನ್ನು ಚಿತ್ರದಲ್ಲಿ ಅಳವಡಿಸಿದ್ದೇವೆ’ ಎಂದರು.

‘ಈಗ ಕೊಟ್ಟಿರುವ ಕ್ಲೈಮ್ಯಾಕ್ಸ್‌ಅನ್ನು ಪ್ರೇಕ್ಷಕ ಜೀರ್ಣಿಸಿಕೊಳ್ಳಲಿಲ್ಲ. ಅದನ್ನು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಅದಕ್ಕಾಗಿ ಮರುಬಿಡುಗಡೆಯ ಅವತರಣಿಕೆಯಲ್ಲಿ ಅದನ್ನು ಬದಲಾಯಿಸಿದ್ದೇವೆ.ಚಿತ್ರದಲ್ಲಿ ಹೊಸದಾಗಿ ಸೇರಿಸಿದ, ಬದಲಾಯಿಸಿದ ಭಾಗಗಳನ್ನು ಮರು ಸೆನ್ಸಾರ್ ಮಾಡಿದ್ದೇವೆ. ಅದು ಈ ಬಾರಿಯ ಸರ್ಪ್ರೈಸ್’ ಎಂದರು ಅಶೋಕ್.

‘ಒಂದು ಭರವಸೆ ಇತ್ತು. ಜನ ನೋಡಿ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುಖ್ಯವಾಗಿ ಪ್ರಬಲವಾದ ಸ್ಕ್ರಿಪ್ಟ್ ಇತ್ತು. ಪೇಪರ್ ವರ್ಕ್ ಚೆನ್ನಾಗಿ ಮಾಡಿದ್ದೇವೆ. ಇರೋದರಲ್ಲೇ ಬೇರೆ ರೀತಿ ತೋರಿಸಬೇಕು. ಈ ಗುರಿ ಇಟ್ಟುಕೊಂಡು ಕೆಲಸ ಮಾಡಿದ್ದೇವೆ. ಅದರ ಪರಿಣಾಮ ಒಟಿಟಿ ವೇದಿಕೆಗಳಲ್ಲಿ ಇದು ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಈಗ ಹೊಸ ಚಿತ್ರಗಳು ಬಿಡುಗಡೆ ಆಗ್ತಾ ಇಲ್ಲ. ಅನೇಕ ಚಿತ್ರಗಳು ಮರುಬಿಡುಗಡೆ ಆಗ್ತಾ ಇವೆ. ನಾವೂ ಅದೇ ಪ್ರಯೋಗಕ್ಕೆ ಇಳಿದಿದ್ದೇವೆ’ ಎಂದರು.

‘ಥ್ರಿಲ್ಲರ್ ಚಿತ್ರ ಮಾಡುವ ಯೋಜನೆ ಇದೆ. ಅದಿನ್ನೂ ಬರವಣಿಗೆಯ ಹಂತದಲ್ಲಿದೆ’ ಎಂದು ಸುಳಿವು ನೀಡಿದರು.

ಪೂರ್ಣ ಸಂದರ್ಶನ ಕೇಳಿ: ಕನ್ನಡಧ್ವನಿ ಪ್ರಜಾವಾಣಿ ಪಾಡ್ಕಾಸ್ಟ್ನಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.