ಭಾನುವಾರ, ಸೆಪ್ಟೆಂಬರ್ 19, 2021
23 °C

ವಿಘ್ನೇಶ್ ಶಿವನ್ ಜೊತೆ ನಿಶ್ಚಿತಾರ್ಥ ದೃಢೀಕರಿಸಿದ ನಯನತಾರಾ?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರು ವಿಘ್ನೇಶ್ ಶಿವನ್ ಅವರೊಂದಿಗಿನ ನಿಶ್ಚಿತಾರ್ಥವನ್ನು ದೃಢೀಕರಿಸಿದ್ದಾರೆಯೇ? ಹೌದು, ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೊಂದು ಸುದ್ದಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡಿನ ಖಾಸಗಿ ಚಾನೆಲ್‌‌ವೊಂದು ಬಿಡುಗಡೆ ಮಾಡಿರುವ ಪ್ರೊಮೊ ವಿಡಿಯೊದಲ್ಲಿ ನಿಶ್ಚಿತಾರ್ಥದ ಬಗ್ಗೆ ನಯನತಾರಾ ರಹಸ್ಯ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: 

ವಿಜಯ್ ಟೆಲಿವಿಷನ್‌ನಲ್ಲಿ ತಮ್ಮ ಹೊಸ ಚಿತ್ರ 'ನೆಟ್ರಿಕಣ್' ಪ್ರಚಾರಕ್ಕಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕಿ ದಿವ್ಯದರ್ಶಿ, ಕೈಯಲ್ಲಿರುವ ರಿಂಗ್ (ಉಂಗುರ) ಬಗ್ಗೆ ಕೇಳಿದಾಗ, ಇದು 'ನಿಶ್ಚಿತಾರ್ಥದ ಉಂಗುರ' ಎಂದು ನಯನತಾರಾ ನಗುಮುಖದಿಂದಲೇ ಉತ್ತರಿಸುತ್ತಾರೆ.

 

 

ಮಾತು ಮುಂದುವರಿಸಿದ ನಿರೂಪಕಿ, ವಿಘ್ನೇಶ್ ಶಿವನ್ ಅವರಲ್ಲಿ ಅತಿ ಹೆಚ್ಚು ಇಷ್ಟಪಡುವ ಅಂಶ ಏನು ಎಂದು ಕೇಳಿದಾಗ, 'ಎಲ್ಲವೂ ಇಷ್ಟ' ಎಂದು ತಿಳಿಸುತ್ತಾರೆ.

ಎನ್‌ಡಿಟಿವಿ ವರದಿಯಂತೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ 2018ರಿಂದಲೇ ಡೇಟಿಂಗ್ ಮಾಡುತ್ತಿದ್ದಾರೆ. 2015ರಲ್ಲಿ 'ನಾನುಮ್ ರೌಡಿಧಾನ್' ಸಿನಿಮಾದ ಬಳಿಕ ಅವರಿಬ್ಬರ ನಡುವೆ ಪ್ರೀತಿ ಉಂಟಾಗಿದೆ. ಆದರೆ ಮದುವೆಯ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ.

ಕಳೆದ ವರ್ಷ ವಿಘ್ನೇಶ್ ಶಿವನ್ ತಮ್ಮ 35ನೇ ಹುಟ್ಟುಹಬ್ಬವನ್ನು ನಯನತಾರಾ ಜೊತೆಗೆ ಗೋವಾದಲ್ಲಿ ಆಚರಿಸಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಪ್ರಿಯತಮೆಯ ಕೈಬೆರಳಿನಲ್ಲಿ ಉಂಗುರದ ಚಿತ್ರವನ್ನು ಹಂಚಿದ್ದರು. ಇವೆಲ್ಲವೂ ನಯನತಾರಾ ಹಾಗೂ ವಿಘ್ನೇಶ್ ನಡುವಣ ನಿಶ್ಚಿತಾರ್ಥಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪುಷ್ಠಿ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು