ಬುಧವಾರ, ಜೂನ್ 16, 2021
22 °C

ರಚಿತಾ ರಾಮ್‌: ಡಿಂಪಲ್‌ ಕ್ವೀನ್‌ ಹೊಸ ಸಿನಿಮಾ ‘ಲಿಲ್ಲಿ’

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಸದ್ಯ ಕನ್ನಡದ ಚಿತ್ರರಂಗದ ಮಟ್ಟಿಗೆ ‘ಲಿಲ್ಲಿ’ ಯಾರೆಂದರೆ ನಟಿ ರಶ್ಮಿಕಾ ಮಂದಣ್ಣ ಹೆಸರು ಅಭಿಮಾನಿಗಳಿಗೆ ನೆನಪಾಗಬಹುದು. ‘ಡಿಯರ್‌ ಕಾಮ್ರೆಡ್‌’ ಸಿನಿಮಾದಲ್ಲಿ ಅವರದು ‘ಲಿಲ್ಲಿ’ ಪಾತ್ರ. ಟಾಲಿವುಡ್‌ನಲ್ಲೂ ಈ ಲಿಲ್ಲಿಗೆ ಅಪಾರ ಅಭಿಮಾನಿಗಳಿದ್ದಾರೆ. ಇದೇ ಹೆಸರಿನ ಸಿನಿಮಾ ಕನ್ನಡದಲ್ಲೂ ಬರಲಿದೆ. ಆ ಚಿತ್ರದ ನಾಯಕಿ ಕೊಡಗಿನ ಲಿಲ್ಲಿಯಲ್ಲ, ಮಂಡ್ಯದ ಡಿಂಪಿ, ಅಂದರೆ ‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌.

ವರಮಹಾಲಕ್ಷ್ಮಿ ಹಬ್ಬದಂದು ಈ ‘ಲಿಲ್ಲಿ’ ಶೀರ್ಷಿಕೆಯ ಪೋಸ್ಟರ್‌ ಅನ್ನು ಚಿತ್ರತಂಡ ಹಂಚಿಕೊಂಡಿದೆ. ‘ಲಿಲ್ಲಿ’ಗೆ ‘ಚೈಲ್ಡ್ ಆಫ್ ರೇಜ್’‌ ಟ್ಯಾಗ್‌ಲೈನ್‌ ಕೊಡಲಾಗಿದೆ. ಫಸ್ಟ್‌ ಲುಕ್‌ ಸದ್ಯದಲ್ಲೇ ಬಿಡುಗಡೆಯಾಗಲಿದೆಯಂತೆ. ಈ ಚಿತ್ರಕ್ಕೆ ವಿಜಯ್‌ ಎಸ್‌. ಗೌಡ ಆ್ಯಕ್ಷನ್‌ ಕಟ್ ಹೇಳುತ್ತಿದ್ದು, ನಾಗರಾಜ್‌ ಮತ್ತು ಎಸ್‌. ಸುಬ್ರಹ್ಮಣಿ ಬಂಡವಾಳ ಹೂಡುತ್ತಿದ್ದಾರೆ.

ಏಕ್‌ ಲವ್‌ ಯಾ, 100, ಏಪ್ರಿಲ್‌, ಡಾಲಿ, ಸೂಪರ್‌ ಮಾಚಿ (ತೆಲುಗು– ಕನ್ನಡ ), ಸೀರೆ, ರವಿ ಬೋಪಣ್ಣ, ಪಂಥ, ಸಂಜಯ್‌ ಅಲಿಯಾಸ್‌ ಸಂಜು ಸೇರಿ ಸುಮಾರು ಹತ್ತು ಚಿತ್ರಗಳಲ್ಲಿ ರಚಿತಾ ರಾಮ್‌ ಬ್ಯುಸಿಯಾಗಿದ್ದಾರೆ. ‘ಲಿಲ್ಲಿ’ ಕೂಡ ಇದೇ ವರ್ಷದೊಳಗೆ ಚಿತ್ರೀಕರಣ ಈ ಆರಂಭವಾಗುವ ನಿರೀಕ್ಷೆ ಇದೆ.  

ರಮೇಶ್‌ ಅರವಿಂದ್‌ ನಾಯಕನಾಗಿರುವ ‘100’ ಸಿನಿಮಾಗಳಲ್ಲಿ ರಚಿತಾ ಪ್ರಮುಖ ನಿರ್ವಹಿಸುತ್ತಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ‘ಜೋಗಿ’ ಖ್ಯಾತಿಯ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಹಾಗೆಯೇ ತೆಲುಗಿನ ಸ್ಟಾರ್‌ ನಟ ಕಲ್ಯಾಣ್‌ ದೇವ್‌ ಜತೆಗೆ ನಟಿಸುತ್ತಿರುವ ‘ದಿಸ್‌ ಪ್ರಾಪರ್ಟಿ ಬಿಲಾಂಗ್ಸ್‌ ಟು ಮೀನಾಕ್ಷಿ’ ಸಿನಿಮಾ ಕೂಡ ಬಹುತೇಕ ಚಿತ್ರೀಕರಣ ಮುಗಿದಿದ್ದು, ದ್ವಿಭಾಷೆಯ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

ಕೊರೊನಾ ಲಾಕ್‌ಡೌನ್‌ ಸಮಯವನ್ನು ಹೊಸ ಕಥೆ ಕೇಳಲು ಮತ್ತು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ರಚಿತಾ ಬಳಸಿಕೊಂಡರಂತೆ. ಸದ್ಯ ‘ಪುಷ್ಪಕ ವಿಮಾನ’ ಚಿತ್ರತಂಡವನ್ನು ರಚಿತಾ ಸೇರಿಕೊಂಡಿದ್ದು, ‘ನಾನು ಹಿಂದೆಂದೂ ಮಾಡಿರದಂತಹ ಪಾತ್ರ ಇದರಲ್ಲಿದೆ. ನಿರ್ದೇಶಕ ಎಸ್. ರವೀಂದ್ರನಾಥ್ ಅವರಿಗೆ ಇದು ಚೊಚ್ಚಲ ಸಿನಿಮಾ ಆಗಿದ್ದರೂ ಒಳ್ಳೆಯ ಕಂಟೆಂಟ್‌ ಜತೆಗೆ ಬಂದಿದ್ದಾರೆ’ ಎನ್ನುವ ಖುಷಿ ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು