ಬುಧವಾರ, ಆಗಸ್ಟ್ 17, 2022
29 °C

ಹಾಲಿವುಡ್ ಹಾದಿ ಹಿಡಿದರೇ ತಮಿಳಿನ ಎ.ಆರ್‌. ಮುರುಗದಾಸ್‌‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎ.ಆರ್‌. ಮುರುಗದಾಸ್‌, ದಕ್ಷಿಣ ಭಾರತದ ಸಿನಿರಂಗದಲ್ಲಿ ಚಿರಪರಿಚಿತ ಹೆಸರು. ದಕ್ಷಿಣ ಸಿನಿಕ್ಷೇತ್ರದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಮುರುಗದಾಸ್ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರ ನಿರ್ದೇಶನದ ಸಿನಿಮಾಗಳು ಯಶಸ್ಸಿನ ಹಾದಿ ಕಾಣುವಲ್ಲಿ ವಿಫಲವಾಗುತ್ತಿರುವುದು ಸುಳ್ಳಲ್ಲ. ‘ಸ್ಪೈಡರ್‌’ ಹಿಟ್ ಆಗಲಿಲ್ಲ. ‘ಸರ್ಕಾರ್’ ಸಿನಿಮಾ ಕೂಡ ಜನರಿಗೆ ಅಷ್ಟು ಮೆಚ್ಚುಗೆಯಾಗಿರಲಿಲ್ಲ, ‘ಪೆಟ್ಟಾ’ ಸಿನಿಮಾ ಕೂಡ ಜನರ ನಿರೀಕ್ಷೆಯನ್ನು ಸುಳ್ಳು ಮಾಡಿತ್ತು.

‘ತುಪಾಕಿ’ ಸೀಕ್ವೆಲ್‌ನಲ್ಲಿ ಮುರುಗದಾಸ್ ಅವರ ನೆಚ್ಚಿನ ನಟ ವಿಜಯ್ ಜೊತೆ ಕೆಲಸ ಮಾಡಬೇಕಿತ್ತು. ಲಾಕ್‌ಡೌನ್‌ಗೂ ಮೊದಲು ಈ ಸಿನಿಮಾದ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.

ಆದರೆ ಈಗ ಮುರುಗ್‌ದಾಸ್‌ ದೊಡ್ಡ ಬಜೆಟ್‌ನ ಸಿನಿಮಾವೊಂದನ್ನು ಮಾಡುವ ಯೋಚನೆಯಲ್ಲಿದ್ದಾರೆ ಎಂಬ ಮಾತು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅವರು ಈಗಾಗಲೇ ಗಜಿನಿ, ಹಾಲಿಡೇ ಹಾಗೂ ಅಕಿರಾ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆ ಕಾರಣಕ್ಕೆ ಮುರುಗದಾಸ್‌ ಮುಂದೆ ಹಾಲಿವುಡ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಡಿಸ್ನಿ ಪಿಕ್ಚರ್‌ನೊಂದಿಗೆ ಮುರುಗದಾಸ್ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ‘ಬ್ಯೂಟಿ ಅಂಡ್ ದಿ ಬೀಸ್ಟ್‌’, ‘ಜಂಗಲ್‌ ಬುಕ್‌’ನಂತೆ ಈ ಸಿನಿಮಾ ಆ್ಯಕ್ಷನ್‌ನೊಂದಿಗೆ ಆ್ಯನಿಮೇಷನ್ ಅನ್ನು ಒಳಗೊಳ್ಳಲಿದೆ ಎನ್ನಲಾಗುತ್ತಿದೆ.

ಈ ಪ್ರಾಜೆಕ್ಟ್ ಚರ್ಚೆಯ ಹಂತದಲ್ಲಿದ್ದು ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಇದು ಅಧಿಕೃತವಾದರೆ ಹಾಲಿವುಡ್‌ ಪ್ರವೇಶಿಸಿದ ಭಾರತೀಯ ಸಿನಿ ನಿರ್ದೇಶಕರ ಪಟ್ಟಿಯಲ್ಲಿ ಮುರುಗದಾಸ್ ಹೆಸರೂ ಸೇರಲಿದೆ. ಆದರೆ ಇದು ಗಾಳಿಸುದ್ದಿಯೇ ಅಥವಾ ನಿಜವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು