ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಸಿನಿಮಾ ಬಿಡುಗಡೆ ನಂತರ ಚಿತ್ರಕಥೆ– ನಿರ್ದೇಶಕ ವರ್ಮಾ

Published 13 ಜೂನ್ 2024, 13:17 IST
Last Updated 13 ಜೂನ್ 2024, 13:17 IST
ಅಕ್ಷರ ಗಾತ್ರ

ಹೈದರಾಬಾದ್: ‘ಸಿನಿಮಾ ಬಿಡುಗಡೆ ನಂತರ ಚಿತ್ರಕಥೆ ಬರೆಯಲು ಆರಂಭಿಸಿದ ವಿಚಿತ್ರ ಸನ್ನಿವೇಶ ನಟ ದರ್ಶನ್‌ ಆರೋಪಿಯಾಗಿರುವ ಈ ರೇಣುಕಸ್ವಾಮಿ ಕೊಲೆ ಪ್ರಕರಣ’ ಎಂದು ಚಿತ್ರ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಸಾಮಾನ್ಯವಾಗಿ ಚಿತ್ರ ತಯಾರಿಸುವವರು ಮೊದಲು ಚಿತ್ರಕಥೆಯನ್ನು ಸಿದ್ಧಪಡಿಸಿಕೊಂಡ ನಂತರವಷ್ಟೇ ಚಿತ್ರೀಕರಣಕ್ಕೆ ಹೋಗುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಚಿತ್ರೀಕರಣ ಆರಂಭವಾಗಿರುತ್ತದೆ. ಆಯಾ ಹಂತಗಳಲ್ಲೇ ಚಿತ್ರಕಥೆಯನ್ನು ಸಿದ್ಧಪಡಿಸುವ ಪರಿಪಾಠವೂ ಇದೆ’ ಎಂದಿದ್ದಾರೆ.

‘ಆದರೆ ದರ್ಶನ್ ಭಾಗಿಯಾಗಿರುವ ಕೊಲೆ ಪ್ರಕರಣದಲ್ಲಿ, ಸಿನಿಮಾ ಬಿಡುಗಡೆ ನಂತರ ಚಿತ್ರಕಥೆ ಹೆಣೆಯಲಾಗುತ್ತಿದೆ’ ಎಂದಿದ್ದಾರೆ.

ವರ್ಮಾ ಅವರ ಟ್ವೀಟ್‌ಗೆ 40ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. ಇದರ ಕುರಿತು ನೀವೇ ಒಂದು ಚಿತ್ರ ಮಾಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಇದು ಚರ್ಚೆಯು ಸಿನಿಮಾದಿಂದ ರಾಜಕೀಯಕ್ಕೆ ಹೊರಳುತ್ತಿದೆ ಎಂದಿದ್ದಾರೆ. 

‘ತನ್ನ ವಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸಿದ ಒಬ್ಬ ಕಟ್ಟಾ ಅಭಿಮಾನಿಯನ್ನು ಹತ್ಯೆಗಯ್ಯಲು ಮತ್ತೊಬ್ಬ ಕಟ್ಟಾಭಿಮಾನಿಯನ್ನು ಬಳಸಿದ ವಿಲಕ್ಷಣ ಸನ್ನಿವೇಶ ಸ್ಟಾರ್‌ ಅಂಧಾಭಿಮಾನ ಸಮಸ್ಯೆಗೆ ಸ್ಪಷ್ಟ ಉದಾಹರಣೆ. ಮತ್ತೊಂದೆಡೆ ತನ್ನ ನೆಚ್ಚಿನ ನಟ ಬದುಕು ಹೇಗೆ ನಡೆಸಬೇಕು ಎಂಬುದನ್ನು ಅಭಿಮಾನಿಗಳು ಬಯಸುವುದು ಹಾಗೂ ಆದೇಶಿಸುವುದು ಇದೇ ಸಮಸ್ಯೆಯ ತಡೆಯಲು ಅಸಾಧ್ಯವಾದ ಸೈಡ್‌ ಎಫೆಕ್ಟ್‌’ ಎಂದು ವರ್ಮಾ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT