ಸೋಮವಾರ, ಡಿಸೆಂಬರ್ 5, 2022
25 °C

ಬಾಲಿವುಡ್ ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲಿಯನ್ ಸಾವು ಆಕಸ್ಮಿಕ: ಸಿಬಿಐ

ಮೃತ್ಯುಂಜಯ್ ಬೋಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್ ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲಿಯನ್ ಸಾವು ಆಕಸ್ಮಿಕ ಎಂಬ ತೀರ್ಮಾನಕ್ಕೆ ಸಿಬಿಐ ಬಂದಿದೆ.

2020, ಜೂನ್ 8ರ ತಡರಾತ್ರಿ ಮುಂಬೈನ ಪಶ್ಚಿಮ ಸಬರ್ಬನ್‌ನ ಮಲಾಡ್ ಪ್ರದೇಶದ ರೀಜೆಂಟ್ ಕಟ್ಟಡದ 14ನೇ ಮಹಡಿಯಿಂದ ಬಿದ್ದು ದಿಶಾ(28)ಸಾವಿಗೀಡಾಗಿದ್ದರು. ಜೂನ್ 14, 2020ರಲ್ಲಿ ಬಾಂದ್ರಾ ಪ್ರದೇಶದ ಡೂಪ್ಲೆಕ್ಸ್ ಫ್ಲಾಟ್‌ನಲ್ಲಿ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಪತ್ತೆಯಾಗುವುದಕ್ಕೂ 5 ದಿನ ಮೊದಲು ದಿಶಾ ಸಾಲಿಯನ್ ಮೃತಪಟ್ಟಿದ್ದರು.

ಎರಡೂ ಪ್ರಕರಣಗಳಿಗೂ ಸಂಬಂಧವಿದೆ ಎಂದು ಕೇಂದ್ರದ ಎಂಎಸ್‌ಎಂಇ ಸಚಿವ ನಾರಾಯಣ ರಾಣೆ ಮತ್ತು ಅವರ ಪುತ್ರ ನಿತೀಶ್ ರಾಣೆ ಸೇರಿದಂತೆ ಕೆಲ ಬಿಜೆಪಿ ನಾಯಕರು ಆರೋಪಿಸಿದ್ದರು.

ದಿಶಾ ಅವರನ್ನು ಹತ್ಯೆ ಮಾಡುವುದಕ್ಕೂ ಮೊದಲು ಅತ್ಯಾಚಾರ ನಡೆಸಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸುಶಾಂತ್, ಅತ್ಯಾಚಾರಿಗಳನ್ನು ಬಯಲು ಮಾಡಲು ಮುಂದಾಗಿದ್ದರಿಂದ ಅವರ ಹತ್ಯೆಯೂ ಆಗಿದೆ ಎಂದು ಅವರು ಆರೋಪಿಸಿದ್ದರು.

ದಿಶಾ ಸಾವಿನ ಕುರಿತಂತೆ ಪ್ರತ್ಯೇಕ ಎಫ್ಐಆರ್ ಅಥವಾ ದೂರು ದಾಖಲಾಗಿರಲಿಲ್ಲ. ಸುಶಾಂತ್ ಸಾವಿನ ಪ್ರಕರಣ ಸಂಬಂಧ ತನಿಖೆ ಜೊತೆಯಲ್ಲೇ ದಿಶಾ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದೆ.

ಸುಶಾಂತ್ ಸಾವಿನ ಪ್ರಕರಣದಲ್ಲಿ ತನಿಖೆಯಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಮಾದಕ ಪದಾರ್ಥ ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು