ದುನಿಯಾ ವಿಜಯ್ ನಿರ್ದೇಶಿಸುತ್ತಿರುವ ‘ಸಿಟಿ ಲೈಟ್ಸ್’ ಚಿತ್ರದಲ್ಲಿ ನಾಯಕರಾಗಿ ವಿನಯ್ ರಾಜ್ಕುಮಾರ್ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಮೇಕಿಂಗ್ ವಿಡಿಯೊವನ್ನು ಚಿತ್ರತಂಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಜತೆ ನಾಯಕಿಯಾಗಿ ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ಅವರು ಕಾಣಿಸಿಕೊಂಡಿದ್ದಾರೆ..

'ಸಲಗ' ಹಾಗೂ 'ಭೀಮ' ಚಿತ್ರದ ಯಶಸ್ಸಿನ ನಂತರ ವಿಜಯ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರ ಇದಾಗಿದೆ.
.ಹೊಸ ಚಿತ್ರದ ಮುಹೂರ್ತ ನೆರವೇರಿಸಿದ ‘ಹೃದಯಂ’ ಚಿತ್ರದ ನಟಿ ಕಲ್ಯಾಣಿ ಪ್ರಿಯದರ್ಶನ್.
ಒಂದು ನಗರ ಸಾವಿರಾರು ಜನರನ್ನು ಕೈಬೀಸಿ ಕರೆಯುತ್ತದೆ. ಹಾಗೆ ಮಹಾನಗರಕ್ಕೆ ಬದುಕು ಹುಡುಕಿಕೊಂಡು ಬೇರೆ ಊರಿನಿಂದ ಬರುವ ಯುವಕರ ಕಥೆಯಿದು. ಬೇರೆ ಊರುಗಳಿಂದ ಕರ್ನಾಟಕಕ್ಕೆ ಬರುತ್ತಾರೆ. ನಂತರ ಅವರ ಮುಂದಿನ ಬದುಕಿನ ಪಯಣವನ್ನು ಕುರಿತು ‘ಸಿಟಿ ಲೈಟ್ಸ್’ ಚಿತ್ರದಲ್ಲಿ ಕಾಣಬಹದು.

'ಸಿದ್ಧಾರ್ಥ್' ಚಿತ್ರದ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ ವಿನಯ್ ರಾಜ್ಕುಮಾರ್ (ರಾಘವೇಂದ್ರ ರಾಜಕುಮಾರ್ ಅವರ ಮಗ). ‘ಅಂದೊಂದಿತ್ತು ಕಾಲ’, ಪೆಪೆ, ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ‘ನೀನ್ ಯಾರೆಲೇ’ ಹಾಡಿನ ಮೂಲಕ ಸಿನಿ ಪ್ರಿಯರಿಗೆ ಇನ್ನಷ್ಟು ಹತ್ತಿರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.