ಗುರುವಾರ , ಮೇ 19, 2022
23 °C

‘ಏಕ್‌ಲವ್‌ ಯಾ’ ಚಿತ್ರದ ವಿಡಿಯೋ ಹಾಡು ನಾಲ್ಕು ಭಾಷೆಗಳಲ್ಲಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ಯಾ’ ಚಿತ್ರ ವಿಡಿಯೋ ಹಾಡನ್ನು ನಾಲ್ಕು ಭಾಷೆಗಳಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ಈ ಹಾಡು ಬಿಡುಗಡೆ ಆಗಿದೆ.

ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತವಿದೆ. ಅರ್ಮಾನ್‌ ಮಲ್ಲಿಕ್‌ ಹಾಡಿದ್ದಾರೆ. ಎ2 ಮ್ಯೂಸಿಕ್‌ ಆಡಿಯೋ ಸಂಸ್ಥೆ ನಿರ್ಮಾಣ ಮಾಡಿದೆ. ಪ್ರೇಮ್‌ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರೀಷ್ಮಾ ನಾನಯ್ಯ ಮತ್ತು ರಾಣಾ ಮತ್ತು ರಚಿತಾರಾಮ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಯೂರೋಪ್‌, ಲಡಾಕ್‌, ಲೇಹ್‌ನಂತಹ ಸುಂದರ ತಾಣಗಳಲ್ಲಿ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಪ್ರೇಮಿಗಳ ದಿನದಂದೇ ನಾಲ್ಕು ಭಾಷೆಗಳಲ್ಲಿ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರಪ್ರೇಮಿಗಳಿಗೆ ಚಿತ್ರತಂಡ ಖುಷಿ ಕೊಟ್ಟಿದೆ. ಹಾಡು ಬಿಡುಗಡೆಯಾದಂದೇ ಅದನ್ನು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಯುವ ಜೋಡಿಯ ಪ್ರೇಮ ಕಥೆಯ ವಸ್ತು ‘ಏಕ್‌ ಲವ್‌ಯಾ’ ಚಿತ್ರದ್ದು. ರಕ್ಷಿತಾ ಪ್ರೇಂ ಚಿತ್ರ ನಿರ್ಮಿಸುತ್ತಿದ್ದಾರೆ. ಅಂದ ಹಾಗೆ ಇದು ರಾಣಾ ಅವರ ಮೊದಲ ಚಿತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು