ಮಂಗಳವಾರ, ಸೆಪ್ಟೆಂಬರ್ 21, 2021
25 °C

ಚೀನಾದಲ್ಲಿ ಹೃತಿಕ್–ಯಾಮಿ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಐಕಾನಿಕ್ ಎನಿಸುವ ಹಾಡುಗಳು ಸಾಕಷ್ಟಿವೆ. ಆದರೆ ‘ಏಕ್ ಪಲ್ ಕ ಜೀನಾ’ ಹಾಡನ್ನು ಮತ್ತಾವುದೂ ಮೀರಿಸಲಾರದು. ಹೃತಿಕ್ ಅವರ ಚೊಚ್ಚಲ ಚಿತ್ರ ‘ಕಹೋ ನಾ ಪ್ಯಾರ್ ಹೈ’ನಲ್ಲಿ ಈ ಹಾಡು ಮಾಡಿದ್ದ ಮೋಡಿ ಅಂಥದ್ದು. 

ಹೃತಿಕ್ ಮತ್ತೆ ಈ ಹಾಡಿಗೆ ಹೆಜ್ಜೆ ಹಾಕಿದರು. ಈ ಬಾರಿ ನಟಿ ಯಾಮಿ ಗೌತಮಿ ಜೊತೆಯಾದರು. ಅದೂ ಚೀನಾ ದೇಶದಲ್ಲಿ. ಯಾಮಿ ಹಾಗೂ ಹೃತಿಕ್ 2017ರಲ್ಲಿ ‘ಕಾಬಿಲ್’ ಸಿನಿಮಾ ಮೂಲಕ ಪರಿಚಿತರಾದರು. ಇವರಿಬ್ಬರಿಗೆ ಚೀನಾದಲ್ಲೂ ಅಭಿಮಾನಿಗಳಿದ್ದಾರೆ ಎಂಬುದು ಮೊನ್ನೆ ಸಾಬೀತಾಯಿತು. ಕಾಬಿಲ್ ಚಿತ್ರ ಚೀನಾದಲ್ಲಿ ಬುಧವಾರ (ಜೂನ್ 5) ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಇಲ್ಲಿ ಇಬ್ಬರೂ ಏಕ್ ಪಲ್ ಕಾ ಜೀನಾ ಗೀತೆಗೆ ಹೆಜ್ಜೆ ಹಾಕಿದರು. 

ಚೀನಾದ ತಮ್ಮ ಅಭಿಮಾನಿಗಳಿಗೆ ಒಂದಿಷ್ಟು ಅಚ್ಚರಿ ನೀಡಲು ಇಬ್ಬರೂ ಯೋಜನೆ ರೂಪಿಸಿಕೊಂಡಿದ್ದರು. ಬಾಲಿವುಡ್ ಹಾಡುಗಳ ಜೊತೆ ಒಂದಿಷ್ಟು ಚೀನೀ ಹಾಡುಗಳಿಗೂ ಸ್ಟೆಪ್ ಹಾಕಿ ರಂಜಿಸಿದರು. ಇದಕ್ಕಾಗಿ ಚೀನೀ ನೃತ್ಯವನ್ನೂ ಕೊಂಚ ಅಭ್ಯಾಸ ಮಾಡಿಕೊಂಡಿದ್ದರು. 

‘ಸೂಪರ್ 30‘ ಪೋಸ್ಟರ್
ಜುಲೈ 12ರಂದು ಬಿಡುಗಡೆಗೆ ಸಿದ್ಧವಾಗಿರುವ ಹೃತಿಕ್ ಅಭಿನಯದ ‘ಸೂಪರ್ 30’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಬಿಹಾರದ ಗಣಿತ ಶಿಕ್ಷಕ ಆನಂದ್ ಕುಮಾರ್ ಅವರನ್ನು ಕುರಿತ ಸಿನಿಮಾ ಇದು. ಬಡತನದಲ್ಲಿರುವ ಪ್ರತಿಭಾವಂತ 30 ಮಕ್ಕಳನ್ನು ಆರಿಸಿಕೊಂಡು ಅವರನ್ನು ಐಐಟಿ ಪರೀಕ್ಷೆಗೆ ಸಿದ್ಧಪಡಿಸುವಾಗ ಆನಂದ್ ಕುಮಾರ್ ಎದುರಿಸಿದ ಸವಾಲುಗಳೇ ಚಿತ್ರದ ಹೂರಣ. ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಊಟ–ವಸತಿ ಒದಗಿಸಿದ್ದು ಅವರ ಹೆಗ್ಗಳಿಕೆ. ಅವರ ಯಶೋಗಾಂಥೆಯು ‘ಸೂಪರ್ 30’ ಹೆಸರಿನಲ್ಲಿ ಸಿನಿಮಾ ಆಗಿ ತೆರೆಗೆ ಬರುತ್ತಿದೆ. ಹೃತಿಕ್ ಇದರಲ್ಲಿ ಆನಂದ್ ಕುಮಾರ್ ಅವರ ಪಾತ್ರ ನಿರ್ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು