ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಗನಾ ರನೌತ್‌ ನಟನೆಯ ‘ಎಮರ್ಜೆನ್ಸಿ’ ಟ್ರೇಲರ್‌ ಬಿಡುಗಡೆ

Published : 15 ಆಗಸ್ಟ್ 2024, 10:33 IST
Last Updated : 15 ಆಗಸ್ಟ್ 2024, 10:33 IST
ಫಾಲೋ ಮಾಡಿ
Comments

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ನಟನೆಯ ‘ಎಮೆರ್ಜೆನ್ಸಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ, ಟ್ರೇಲರ್‌ನಲ್ಲೇ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಝೀ ಸ್ಟುಡಿಯೋಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಟ್ರೇಲರ್‌ ನಿನ್ನೆ (ಆ.14) ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ವೀಕ್ಷಣೆಯಾಗಿದೆ.

ಸೆ.6ರಂದು ಚಿತ್ರ ಜಗತ್ತಿನಾದ್ಯಂತ ತೆರೆಕಾಣಲಿದೆ.

ಟ್ರೇಲರ್‌ನಲ್ಲಿ ಮಿಲಿಂದ್‌ ಸೋಮನ್‌, ಶ್ರೇಯಸ್‌ ತಲ್ಪಡೆ ಮತ್ತು ಸತೀಶ್‌ ಕೌಶಿಕ್‌ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ ಚಿತ್ರದಲ್ಲಿ ಅನುಪಮ್‌ ಖೇರ್‌, ಮಹಿಮಾ ಚೌಧರಿ, ವಿಶಾಖ ನಾಯರ್‌ ನಟಿಸಿದ್ದಾರೆ. 

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಂಗನಾ, ‘ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ. ದೇಶದ ಇತಿಹಾಸದಲ್ಲಿ ಅತಿ ಪ್ರಭಾವಿ ಮಹಿಳೆ’ ಎಂದು ಬರೆದುಕೊಂಡಿದ್ದಾರೆ. 

ಝೀ ಸ್ಟುಡಿಯೋಸ್‌ ಮತ್ತು ಮಣಿಕರ್ಣಿಕಾ ಫಿಲ್ಮ್ಸ್‌ನಡಿ ಚಿತ್ರ ನಿರ್ಮಾಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT