ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುಕಾಲದ ಗೆಳತಿಗೆ ಪ್ರೇಮ ನಿವೇದನೆ ಮಾಡಿ ಫೋಟೊ ಹಂಚಿಕೊಂಡ ಗಾಯಕ ಅರ್ಮಾನ್‌ ಮಲಿಕ್‌

Published 28 ಆಗಸ್ಟ್ 2023, 9:52 IST
Last Updated 28 ಆಗಸ್ಟ್ 2023, 9:52 IST
ಅಕ್ಷರ ಗಾತ್ರ

ಮುಂಬೈ: ಜನಪ್ರಿಯ ಸಂಗೀತ ನಿರ್ದೇಶಕ, ಬಹುಭಾಷಾ ಗಾಯಕ ಅರ್ಮಾನ್‌ ಮಲಿಕ್‌ ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್‌ಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಈ ಮೂಲಕ ನಿಶ್ಚಿತಾರ್ಥದ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. 

ಸುಂದರವಾಗಿ ಅಲಂಕರಿಸಿದ ಜಾಗವೊಂದರಲ್ಲಿ ಅರ್ಮಾನ್‌ ತಮ್ಮ ಮಂಡಿಯೂರಿ ಆಶ್ನಾ ಅವರ ಕೈಗೆ ರಿಂಗ್‌ಅನ್ನು ತೊಡಿಸುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ನಮ್ಮ ದೀರ್ಘ ಪ್ರಯಾಣ ಈಗ ಆರಂಭ’ ಎನ್ನುವಂತೆ ಕ್ಯಾಪ್ಶನ್‌ ಬರೆದಿದ್ದಾರೆ.

ಆಶ್ನಾ ಬಿಳಿಯ ಬಣ್ಣದ ಫ್ರಾಕ್‌ನಲ್ಲಿ ಕಾಣಿಸಿಕೊಂಡರೆ, ಅರ್ಮಾನ್‌ ಅವರು ಬೀಜ್ ಪ್ಯಾಂಟ್‌ಸೂಟ್‌ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. 

ಈ ಹಿಂದೆ ಹಲವು ಪಾರ್ಟಿ, ಕಾರ್ಯಕ್ರಮಗಳಲ್ಲಿ ಅರ್ಮಾನ್‌ ಮತ್ತು ಆಶ್ನಾ ಅವರು ಜೊತೆಯಾಗಿರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT