ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್ ನಾಗ್ ಹುಟ್ಟೂರಲ್ಲಿ ‘ಫ್ಯಾನ್’ ಹಾಡು

Last Updated 27 ಜೂನ್ 2019, 12:59 IST
ಅಕ್ಷರ ಗಾತ್ರ

ದರ್ಶಿತ್ ಭಟ್ ನಿರ್ದೇಶನದ ಸಿನಿಮಾ ‘ಫ್ಯಾನ್’. ಇದರ ಪೋಸ್ಟರ್‌ ಬಿಡುಗಡೆ ಸಮಾರಂಭ ಇದೇ ತಿಂಗಳ ಆರಂಭದಲ್ಲಿ ನಡೆದಿತ್ತು. ಈಗ ಫ್ಯಾನ್‌ ತಿರುಗುವಷ್ಟೇ ಹೋರಾಗಿ ಒಂದಿಷ್ಟು ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಒಂದು ಹಾಡನ್ನು ವೀಕ್ಷಕರ ಮುಂದೆ ಇರಿಸಿದೆ.

ಹಾಡನ್ನು ಶಂಕರ್‌ ನಾಗ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಚಿತ್ರಾಪುರದಲ್ಲಿ ಚಿತ್ರೀಕರಿಸಿರುವುದು ಒಂದು ವಿಶೇಷ. ‘ಇದು ಚಿತ್ರಾಪುರದಲ್ಲಿ ಚಿತ್ರೀಕರಣ ಆಗಿರುವ ಮೊದಲ ಹಾಡು. ಶಂಕರ್‌ ನಾಗ್‌ ಹೆಸರು ಈ ಚಿತ್ರವನ್ನು ಜನರ ಬಳಿಗೆ ತಲುಪಿಸುವ ಒಂದು ಶಕ್ತಿ’ ಎಂದರು ಭಟ್. ಅಂದಹಾಗೆ, ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದ ಅತಿಥಿಯಾಗಿದ್ದವರು ನಟ ರಕ್ಷಿತ್ ಶೆಟ್ಟಿ.

ಚಿತ್ರದಲ್ಲಿನ ಹಾಡುಗಳ ಪ್ರತಿ ದೃಶ್ಯವೂ ಚಿತ್ರಕಥೆಗೆ ಪೂರಕವಾಗಿ ಇದೆ. ಯಾವ ಹಾಡನ್ನೂ ಅನಗತ್ಯವಾಗಿ ತುರುಕುವ ಕೆಲಸ ಮಾಡಿಲ್ಲ. ಚಿತ್ರದ ಒಂದು ಹಾಡನ್ನು ಭಗ್ನ ಪ್ರೇಮಿಗಳಿಗಾಗಿ ಅರ್ಪಿಸಲಾಗಿದೆ ಎನ್ನುತ್ತಾರೆ ಅವರು.

ಒಂದು ಸೂಪರ್‌ಹಿಟ್‌ ಧಾರಾವಾಹಿಯ ನಾಯಕ ನಟ ಹಾಗೂ ಆ ನಾಯಕ ನಟನನ್ನು ಸಿಕ್ಕಾಪಟ್ಟೆ ಇಷ್ಟಪಡುವ ಯುವತಿ ಈ ಸಿನಿಕಥೆಯ ಕೇಂದ್ರಬಿಂದುವಿನಲ್ಲಿ ಇದ್ದಾರೆ. ಚಿತ್ರದ ನಾಯಕ ಶಂಕರ್ ನಾಗ್ ಅವರ ಅಭಿಮಾನಿ.

‘ಟಿ.ವಿ. ಮಾಧ್ಯಮಕ್ಕೆ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಸೃಷ್ಟಿಯಾಗಿದ್ದಾರೆ. ಕಿರುತೆರೆ ಧಾರಾವಾಹಿಗಳ ನಾಯಕ ನಟ, ನಟಿಯರ ಮೇಲಿನ ಪ್ರೀತಿಯನ್ನು ಸಿನಿಮಾ ರೂಪದಲ್ಲಿ ತೋರಿಸುವುದು ಚಿತ್ರತಂಡದ ಹಂಬಲ’ ಎಂದು ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ.

ಚಿತ್ರದ ನಾಯಕನ ಪಾತ್ರ ನಿಭಾಯಿಸುತ್ತಿರುವವರು ಆರ್ಯನ್. ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಶೇಕಡ 80ರಷ್ಟು ಭಾಗಗಳ ಚಿತ್ರೀಕರಣ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುತ್ತಮುತ್ತ ನಡೆದಿದೆ. ಉತ್ತರ ಕನ್ನಡದ ಭಾಷೆಯಲ್ಲಿ ಚಿತ್ರದ ಸಂಭಾಷಣೆ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT