ತೆಲುಗಿನ ಖ್ಯಾತ ನಟ ಪ್ರಭಾಸ್ ನಟಿಸುತ್ತಿರುವ, ಹನು ರಾಘವಪುಡಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ.

ಪ್ರಭಾಸ್–ಹನು ಜೋಡಿಯ ಈ ಚಿತ್ರಕ್ಕೆ ‘ಫೌಜಿ’ ಎಂಬ ಶೀರ್ಷಿಕೆ ಇಡಲಾಗಿದೆ. ‘ಫೌಜಿ’ಯಲ್ಲಿ ಪ್ರಭಾಸ್ ಸೈನಿಕನಾಗಿ ನಟಿಸುತ್ತಿದ್ದು, 1940ರ ದಶಕದ ವಸಾಹತುಶಾಹಿ ಭಾರತದ ಹಿನ್ನೆಲೆಯಲ್ಲಿ ಕಥೆ ಇದೆ. ಪೋಸ್ಟರ್ನಲ್ಲಿ ಉರಿಯುತ್ತಿರುವ, ಹರಿದ ಬ್ರಿಟಿಷ್ ಧ್ವಜವಿದ್ದು, ಇದು ದಂಗೆ ಮತ್ತು ಪ್ರತಿರೋಧದ ಚಿತ್ರಣ ಕಟ್ಟಿಕೊಟ್ಟಿದೆ. ಪ್ರಭಾಸ್ಗೆ ಜೋಡಿಯಾಗಿ ಇಮಾನ್ವಿ ನಟಿಸಿದ್ದಾರೆ. ಜೊತೆಗೆ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಜಯಪ್ರದಾ ಮತ್ತು ಭಾನು ಚಂದರ್ ಸೇರಿದಂತೆ ಹಲವರು ಪಾತ್ರ ವರ್ಗದಲ್ಲಿ ಇದ್ದಾರೆ. ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ನಟಿ ಚೈತ್ರ ಜೆ.ಆಚಾರ್ ಅವರೂ ಈ ಸಿನಿಮಾದ ಭಾಗವಾಗಿದ್ದಾರೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ನಡಿ ನವೀನ್ ಯೆರ್ನೇನಿ ಮತ್ತು ವೈ.ರವಿಶಂಕರ್ ಹಾಗೂ ಭೂಷಣ್ ಕುಮಾರ್ ‘ಫೌಜಿ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ, ಸುದೀಪ್ ಚಟರ್ಜಿ ಛಾಯಾಚಿತ್ರಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. ಚಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳ ಜೊತೆಗೆ ಬೆಂಗಾಲಿ ಭಾಷೆಯಲ್ಲಿ ರಿಲೀಸ್ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.