ಜಾಮ್ನಾನಗರ್: ಚೆಕ್ ಬೌನ್ಸ್ ಪ್ರಕರಣ ಎದುರಿಸುತ್ತಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರಿಗೆ ಗುಜರಾತ್‌ನ ಜಾಮ್ನಾನಗರ್‌ನ ಸ್ಥಳೀಯ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ ದೂರುದಾರರಿಗೆ ₹2 ಕೋಟಿ ಹಣ ಪಾವತಿಸುವಂತೆ ಆದೇಶಿಸಿದೆ.

ಕೈಗಾರಿಕೋದ್ಯಮಿ ಅಶೋಕ್ ಲಾಲ್ ಎನ್ನುವವರು 2017ರಲ್ಲಿ ಸಂತೋಷಿ ವಿರುದ್ಧ ದೂರು ನೀಡಿದ್ದರು. ಸಿನಿಮಾ ನಿರ್ಮಾಣಕ್ಕೆ ಸಂತೋಷಿಗೆ ₹1 ಕೋಟಿ ಸಾಲವಾಗಿ ನೀಡಲಾಗಿತ್ತು, ಅದನ್ನು ತೀರಿಸಲು ಅವರು ತಲಾ ₹10 ಲಕ್ಷ ಮೊತ್ತದ 10 ಚೆಕ್‌ಗಳನ್ನು ನೀಡಿದ್ದರು. ಆದರೆ ಎಲ್ಲಾ ಚೆಕ್‌ಗಳು ಬೌನ್ಸ್ ಆಗಿದ್ದವು. ಹೀಗಾಗಿ ಕೋರ್ಟ್ ಮೂಲಕ ನೋಟಿಸ್ ಜಾರಿಗೊಳಿಸಲಾಗಿತ್ತು, ಆದರೆ ಅವರು ಹಣ ನೀಡಲು ವಿಫಲರಾಗಿದ್ದರು ಎಂದು ತಿಳಿಸಿದ್ದಾರೆ.

ರಾಜ್‌ಕುಮಾರ್ ಸಂತೋಷಿ ಅವರು ಬಾಲಿವುಡ್‌ನಲ್ಲಿ. ‘ಗಾಂಧಿ ಗೋಡ್ಸೆ- ಏಕ್ ಯುದ್ಧ್’, ‘ಘಾಯಲ್’, ‘ಘಾಟಕ್’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ ಯಶಸ್ವಿ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.