ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 24ಕ್ಕೆ ‘ಎವಿಡೆನ್ಸ್’ ತೆರೆಗೆ

Published 12 ಮೇ 2024, 23:30 IST
Last Updated 12 ಮೇ 2024, 23:30 IST
ಅಕ್ಷರ ಗಾತ್ರ

‘ಜೋಶ್’ ಖ್ಯಾತಿಯ ರೋಬೊ ಗಣೇಶನ್, ಮಾನಸ ಜೋಶಿ ನಟಿಸಿರುವ ‘ಎವಿಡೆನ್ಸ್’ ಚಿತ್ರ ಮೇ 24ರಂದು ತೆರೆ ಕಾಣಲಿದೆ. ‌

ವಿಚಾರಣೆಯ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಜೊತೆಗೊಂದು ತ್ರಿಕೋನ ಪ್ರೇಮದ ಎಳೆ ಹೊಂದಿರುವ ಚಿತ್ರಕ್ಕೆ ಪ್ರವೀಣ್ ಸಿ.ಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ನಾನು ಚಿತ್ರರಂಗಕ್ಕೆ ಹೊಸಬನಲ್ಲ. ‘ಶ್..’ ಚಿತ್ರದಿಂದ ‘ಉಪೇಂದ್ರ-2’ ವರೆಗೆ ಸೂಪರ್‌ಸ್ಟಾರ್ ಉಪೇಂದ್ರ ಅವರ ಜೊತೆ ಕೆಲಸ ಮಾಡಿರುವೆ. ಈ ಹಿಂದೆ ಎರಡು ಸಿನಿಮಾಗಳನ್ನು ಆರಂಭಿಸಿದರೂ ಕಂಪ್ಲೀಟ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ ಎಂಬುದು ಖುಷಿಯ ವಿಚಾರ’ ಎನ್ನುತ್ತಾರೆ ನಿರ್ದೇಶಕ ಪ್ರವೀಣ್‌.

ಡಾ.ಕೊಡ್ಲಾಡಿ ಸುರೇಂದ್ರಶೆಟ್ಟಿ, ಶ್ರೀನಿವಾಸ್‌ಪ್ರಭು ಸೇರಿದಂತೆ ಹಲವರು ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗದದಲ್ಲಿ ಚಿತ್ರೀಕರಿಸಲಾಗಿರುವ ಈ ಚಿತ್ರದಲ್ಲಿ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಶಶಿಧರಕೋಟೆ, ಮನಮೋಹನ್ ರೈ ಮುಂತಾದವರು ನಟಿಸಿದ್ದಾರೆ. ಆರೋನ್ ಕಾರ್ತಿಕ್ ವೆಂಕಟೇಶ್  ಸಂಗೀತ, ರವಿ ಸುವರ್ಣ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT