ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಪಲ್ ಸುನಿ ಹೊಸ ಸಿನಿಮಾ: ‘ದೇವರು ರುಜು ಮಾಡಿದನು’

Published 8 ಜುಲೈ 2024, 0:46 IST
Last Updated 8 ಜುಲೈ 2024, 0:46 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ‘ಒಂದು ಸರಳ ಪ್ರೇಮಕಥೆ’ಯನ್ನು ಯಶಸ್ವಿಯಾಗಿ ಹೇಳಿ ಮುಗಿಸಿರುವ ನಿರ್ದೇಶಕ ಸಿಂಪಲ್‌ ಸುನಿ ಇದೀಗ ‘ದೇವರು ರುಜು ಮಾಡಿದನು’ ಎನ್ನಲು ಹೊರಟಿದ್ದಾರೆ. ರಂಗಭೂಮಿ ಪ್ರತಿಭೆ, ನವನಟ ವಿರಾಜ್ ಈ ಚಿತ್ರದ ನಾಯಕ.

ಕುವೆಂಪುರವರ ಕವಿತೆ ಸಾಲನ್ನೇ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿರುವ ಸುನಿ ಮತ್ತೊಂದು ಪ್ರೇಮಕಥೆಗೆ ತಯಾರಿ ನಡೆಸಿದಂತೆ. ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಗೊಂಡಿದ್ದು, ಇದೊಂದು ಕಾವ್ಯತ್ಮಕ ಚಿತ್ರ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸದಾ ವಿಭಿನ್ನ ಕಥೆಗಳೊಂದಿಗೆ ಬರುವ ಸುನಿ, ಬಾನೆತ್ತರಕ್ಕೆ ಹಾರು ಪ್ರೇಮದ ಹಕ್ಕಿಗಳ ಕುರುಹನ್ನು ಪೋಸ್ಟರ್‌ನಲ್ಲಿ ನೀಡಿದ್ದಾರೆ. 

ಒಂದು ಕಾಲಕ್ಕೆ ಚಿತ್ರರಂಗದವರ ಖಾಯಂ ಜಾಗವಾಗಿದ್ದ ಗ್ರೀನ್ ಹೌಸ್‌ನ ಮಾಲೀಕ ಗೋವಿಂದ್ ರಾಜ್, ತಮ್ಮ ಪುತ್ರ ವಿರಾಜ್‌ಗಾಗಿ ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ತಂಡ ನಾಯಕಿ ಮತ್ತು ಇನ್ನಿತರ ಕಲಾವಿದರ ಹುಡುಕಾಟದಲಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT