ಶನಿವಾರ, ಜುಲೈ 31, 2021
21 °C
ಬಿಡುಗಡೆಗೊಳ್ಳುತ್ತಿರುವ ಮೊದಲ ಸಿನಿಮಾ ’ಪೆನಿನ್ಸುಲಾ’

ಬಾಗಿಲು ತೆರೆಯಲಿವೆ ಸಿಂಗಪುರ ಚಿತ್ರಮಂದಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌‌ಡೌನ್‌ ನಂತರ ‘ಸಮಗ್ರ ಸುರಕ್ಷಿತಾ ನಿರ್ವಹಣಾ ಕ್ರಮ’ಗಳನ್ನು ಅಳವಡಿಸಿಕೊಂಡು ಸಿಂಗಪುರ ಚಿತ್ರಮಂದಿರಗಳು ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿವೆ.  

ಜುಲೈ 15ರಂದು ‘ಟ್ರೈನ್ ಟು ಬುಸಾನ್ 2: ಪೆನಿನ್ಸುಲಾ’ ಕೋರಿಯನ್‌ ಚಿತ್ರ ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್‌ ನಂತರ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರವಿದು. ಇದು ಕೊರಿಯನ್ ಭಾಷೆಯ ‘ಟ್ರೈನ್ ಟು ಬುಸಾನ್’ ಸೀಕ್ವೆಲ್. ಇದರ ಬೆನ್ನಲ್ಲೇ ಎಸ್ಕೇಪ್ ಫ್ರಮ್ ಪ್ರಿಟೋರಿಯಾ,ಮಿ. ಜೋನ್ಸ್, ದಿ ಬ್ರಿಡ್ಜ್ ಕರ್ಸ್,ಲೋ ಸೀಸನ್ ಸಿನಿಮಾಗಳು ಬಿಡುಗಡೆಯಾಗಲಿವೆ. 

ಕುಟುಂಬದವರು ಮಾತ್ರ ಒಟ್ಟಿಗೆ ಕೂರಲು ಅವಕಾಶ, ಅದು ಐದು ಮಂದಿ ಮಾತ್ರ. ಉಳಿದವರು ಒಂದು ಮೀಟರ್‌ ಅಂತರದಲ್ಲಿ ಕೂರಬೇಕು. ಪ್ರತಿ ಪ್ರದರ್ಶನಕ್ಕೆ 50 ಮಂದಿಗೆ ಮಾತ್ರ ಅವಕಾಶ. ಸಿಂಗಪುರದಲ್ಲಿ ಮಾರ್ಚ್‌ 27ರಿಂದ ಎಲ್ಲ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು