ಮೊನ್ನೆ ರಶ್ಮಿಕಾ, ನಿನ್ನೆ ಸಮಂತಾ ಜೊತೆಯಲ್ಲಿ ಧವನ್! ಏನು ವಿಷಯ? ಎಂದ ನೆಟ್ಟಿಗರು

ಬಾಲಿವುಡ್ ಯುವ ನಟ ವರುಣ್ ಧವನ್ ಈಗ ದಕ್ಷಿಣ ಭಾರತದ ನಟಿಯರ ಜತೆ ಕಾಣಿಸಿಕೊಂಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮುಂಬೈ ಬೀಚ್ನಲ್ಲಿ ರಶ್ಮಿಕಾ ಜೊತೆ, ಹೊಟೇಲ್ವೊಂದರಲ್ಲಿ ಸಮಂತಾ ಜತೆ ವರುಣ್ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗಿವೆ. ಇದನ್ನೇ ನೆಪಮಾಡಿಕೊಂಡು, ಮೊನ್ನೆ ರಶ್ಮಿಕಾ, ನಿನ್ನೆ ಸಮಂತಾ... ಏನು ವಿಷಯ? ವರುಣ್ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.
ಇದನ್ನೂ ಓದಿ: ಮೇ 6ಕ್ಕೆ ಶರಣ್ ನಟನೆಯ ‘ಅವತಾರ ಪುರುಷ’ ಬಿಡುಗಡೆ
ಮುಂಬೈನ ಕಡಲ ತೀರದಲ್ಲಿ ರಶ್ಮಿಕಾ ಜತೆ ವರುಣ್ ಕಾಣಿಸಿಕೊಂಡಿದ್ದರು. ಇಲ್ಲಿ ಅವರು ತಮಿಳಿನ ‘ಬೀಸ್ಟ್’ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೊ ಇಂಟರ್ನೆಟ್ನಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು.
Yo habibo
Love this track and style of Vijay sir pic.twitter.com/YcGBakgORm— VarunDhawan (@Varun_dvn) March 10, 2022
ರಶ್ಮಿಕಾ ಮತ್ತು ವರುಣ್ ಜಾಹೀರಾತಿನಲ್ಲಿ ನಟಿಸುತ್ತಿದ್ದು ಇದರ ಶೂಟಿಂಗ್ಗಾಗಿ ಅವರು ಮುಂಬೈ ಬೀಚ್ನಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಬೀಸ್ಟ್ ಹಾಡಿಗೂ ಹೆಜ್ಜೆ ಹಾಕಿದ್ದರೂ ಎಂದು ವರುಣ್ ಧವನ್ ಮ್ಯಾನೇಜರ್ ಮಾಧ್ಯಮಗಳಿಗೆ ಖಚಿತ ಪಡಿಸಿದ್ದಾರೆ.
ರಶ್ಮಿಕಾ ಜತೆ ಕಾಣಿಸಿಕೊಂಡ ಎರಡು ದಿನಗಳ ಬಳಿಕ ಸಮಂತಾ ಜೊತೆ ಹೊಟೇಲ್ವೊಂದರಲ್ಲಿ ವರುಣ್ ಪ್ರತ್ಯಕ್ಷವಾಗಿದ್ದರು. ಆ ಚಿತ್ರಗಳು ಕೂಡ ಸಾಕಷ್ಟು ವೈರಲ್ ಆಗಿದ್ದವು. ವರುಣ್ ಮತ್ತು ಸಮಂತಾ ‘ಸಿಟಾಡೆಲ್’ ವೆಬ್ ಸಿರೀಸ್ನಲ್ಲಿ ನಟಿಸುತ್ತಿದ್ದು ಅದರ ಶೂಟಿಂಗ್ಗಾಗಿ ಹೊಟೇಲ್ಗೆ ಹೋಗಿದ್ದರು ಎಂದು ಸಿಟಾಡೆಲ್ ತಂಡ ಸ್ಪಷ್ಟಪಡಿಸಿದೆ.
ಬಾಲಿವುಡ್ನಲ್ಲಿ ವರುಣ್ ದವನ್ಗೆ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ವರುಣ್ ಬಾಲಿವುಡ್ ಪ್ರವೇಶ ಮಾಡಿದ್ದಾರೆ.
ಇದನ್ನೂ ಓದಿ: ಹೀಗಿದೆ ನೋಡಿ ಉಪ್ಪಿ ನಿರ್ದೇಶನದ ಹೊಸ ಸಿನಿಮಾ ಶೀರ್ಷಿಕೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.