ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಗೆಯಿಂದ ಟ್ರೋಲ್‌ಗೆ ಗುರಿಯಾದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್‌

Published 22 ಜುಲೈ 2023, 11:14 IST
Last Updated 22 ಜುಲೈ 2023, 11:14 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಕುಟುಂಬದವರೊಂದಿಗೆ ಕಾಣಿಸಿಕೊಂಡ ಬಾಲಿವುಡ್‌ ನಟಿ ಐಶ್ವರ್ಯ ರೈ ಬಚ್ಚನ್‌, ಉಡುಗೆಯೆ ಕಾರಣಕ್ಕೆ ಟ್ರೋಲ್‌ ಆಗಿದ್ದಾರೆ.

ಪತಿ ಅಭಿಷೇಕ್‌ ಬಚ್ಚನ್‌ ಹಾಗೂ ಮಗಳು ಆರಾಧ್ಯ ಅವರೊಂದಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಶನಿವಾರ ಕಾಣಿಸಿಕೊಂಡ ನಟಿ ಐಶ್ವರ್ಯ ರೈ ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ. ಈ ವೇಳೆ ಐಶ್ವರ್ಯ ಕಪ್ಪು ಮತ್ತು ಬಿಳಿ ಬಣ್ಣದ ಉದ್ದನೆಯ ಅಂಗಿ ತೊಟ್ಟಿರುವ ಕೆಲವು ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಕಾರಣವಾಗಿದೆ .

ನಟಿಯ ಉಡುಗೆ ಸಂಬಂಧ ಕಾಮೆಂಟ್‌ ಮಾಡಿರುವ ಅಭಿಮಾನಿಗಳು, ಮದುವೆಯ ನಂತರ ಆಕೆಯ ಉಡುಪಿನ ಶೈಲಿ ಹದಗೆಟ್ಟಿದೆ, ನಾನು ಆಕೆಯನ್ನು ಇಷ್ಟಪಡುತ್ತೇನೆ ಆದರೆ ಆಕೆಯ ಉಡುಗೆಯ ಸ್ಟೈಲ್‌ನಲ್ಲಿ ಬದಲಾವಣೆ ಕಾಣುತ್ತಿದೆ. ಏನಾಗಿದೆ ಏಂದು ತಿಳಿಯುತ್ತಿಲ್ಲ , ಆಕೆಯ ಕೇಶ ವಿನ್ಯಾಸ ಬಿಟ್ಟರೆ ಯಾವುದು ಮೊದಲಿನಂತಿಲ್ಲ, ಪತಿ ಹಾಗೂ ನಟನಾಗಿರುವ ಅಭಿಷೇಕ್‌ ಬಚ್ಚನ್‌ ಆಕೆ ಬೇರೆ ಉಡುಗೆಗಳನ್ನು ತೊಡಲು ಅನುಮತಿಸುತ್ತಿಲ್ಲವೇ?, ನಟಿಗೆ ನ್ಯಾಯ ಬೇಕು ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಸಾಲು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಐಶ್ವರ್ಯ ರೈ ಕೊನೆಯದಾಗಿ 'ಪೊನ್ನಿಯಿನ್ ಸೆಲ್ವನ್ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

1994 ರಲ್ಲಿ ಐಶ್ವರ್ಯ ರೈ ‘ವಿಶ್ವ ಸುಂದರಿ‘ ಕೀರಿಟ ಮುಡಿಗೇರಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT