ಮಂಗಳವಾರ, ಸೆಪ್ಟೆಂಬರ್ 28, 2021
21 °C

ಅಮ್ಮನಾಗುವ ಖುಷಿಯಲ್ಲಿ ನಟಿ ಫ್ರೀಡಾ ಪಿಂಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಕರ್‌ ಪುರಸ್ಕೃತ ‘ಸ್ಲಮ್ ಡಾಗ್ ಮಿಲಿಯನೇರ್’ ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೊ ತಾವು ತಾಯಿಯಾಗುತ್ತಿರುವ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸೋಮವಾರ ರಾತ್ರಿ ಇನ್‌ಸ್ಟಾಗ್ರಾಂನಲ್ಲಿ ಕೋರಿ ಟ್ರಾನ್ ಜೊತೆಗಿರುವ ಬೇಬಿ ಬಂಪ್‌ ಚಿತ್ರವನ್ನು ಶೇರ್‌ ಮಾಡುವ ಮೂಲಕ ಅಮ್ಮನಾಗುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಆ ಚಿತ್ರದ ಜೊತೆಗೆ ಬೇಬಿ ಟ್ರಾನ್‌ ಬರುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.

2017ರಿಂದಲೂ ಫ್ರೀಡಾ ಪಿಂಟೊ ಹಾಗೂ ಕೋರಿ ಟ್ರಾನ್‌ ಡೇಟಿಂಗ್‌ನಲ್ಲಿ ಇದ್ದಾರೆ. 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದರೂ ಬಳಿಕ ಸುಮ್ಮನಾಗಿದ್ದರೂ. ಇದೀಗ ಫ್ರೀಡಾ ಪಿಂಟೊ ಗರ್ಭಿಣಿಯಾಗಿರುವ ಚಿತ್ರವನ್ನು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಫ್ರೀಡಾ ಪಿಂಟೊ ತಾಯಿಯಾಗುತ್ತಿರುವ ವಿಚಾರ ತಿಳಿದ ಹಾಲಿವುಡ್‌ ಹಾಗೂ ಬಾಲಿವುಡ್‌ನ ಹಲವಾರು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. 

‘ಸ್ಲಮ್ ಡಾಗ್ ಮಿಲಿಯನೇರ್’ ಚಿತ್ರದಲ್ಲಿ ನಟಿಸಿದ್ದ ಸಹ ನಟ ದೇವ್‌ ಪಟೇಲ್‌ ಜೊತೆ 6 ವರ್ಷಗಳ ಕಾಲ ಫ್ರೀಡಾ ಪಿಂಟೊ ಡೇಟಿಂಗ್‌ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಆ ಜೋಡಿ 2016ರಲ್ಲಿ ಬೇರೆಯಾಗಿತ್ತು. 2017ರಲ್ಲಿ ಫ್ರೀಡಾ ಪಿಂಟೊಗೆ ಕೋರಿ ಟ್ರಾನ್‌ ಜೊತೆಯಾದರು.

ಸ್ಲಮ್ ಡಾಗ್ ಮಿಲಿಯನೇರ್, ಮೀರಲ್, ಹಾಗೂ ತ್ರಿಶಾ ಸಿನಿಮಾಗಳು ಫ್ರೀಡಾ ಪಿಂಟೊಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಸದ್ಯ ಹಾಲಿವುಡ್‌ನ ಹಲವು ಸಿನಿಮಾ ಹಾಗೂ ವೆಬ್‌ ಸೀರೀಸ್‌ನಲ್ಲಿ ಅವರು ಸಕ್ರಿಯರಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು