ಸೋಮವಾರ, ಡಿಸೆಂಬರ್ 6, 2021
23 °C

ಗಮನಂ ಫಸ್ಟ್ ಲುಕ್: ಸಾಂಪ್ರದಾಯಿಕ ಸೀರೆಯಲ್ಲಿ ಶ್ರೀಯಾ ಶರಣ್ ಹೆಡ್ ಲೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ನಟನೆಯ ‘ಗಮನಂ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಶ್ರೀಯಾ ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪಂಚಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಶ್ರೀಯಾ ನಟನೆಯ ಮೊದಲ ಸಿನಿಮಾ ಇದಾಗಿದೆ. 

ಶ್ರೀಯಾ ಎಂದರೆ ಗ್ಲಾಮರಸ್ ಪಾತ್ರಗಳೇ ಕಣ್ಣ ಮುಂದೆ ಸುಳಿದಾಡುತ್ತವೆ. ಅನೇಕ ವರ್ಷಗಳಿಂದ ಸಿನಿಮಾರಂಗದಲ್ಲಿರುವ ಈಕೆ ಗ್ಲಾಮರಸ್ ಪಾತ್ರಗಳಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಆದರೆ ಈ ಸೀರೆಯ ಲುಕ್ ನೋಡಿದ ಅಭಿಮಾನಿಗಳು ಶ್ರೀಯಾ ಭಿನ್ನ ಪಾತ್ರದ ಮೂಲಕ ಮನರಂಜಿಸಲು ಹೊರಟಿದ್ದಾರೆ ಎಂದು ಖುಷಿಯಾಗಿದ್ದಾರೆ. 

ಸಾಧಾರಣ ಸೀರೆಯಲ್ಲಿ ಕತ್ತಿನಲ್ಲಿ ಒಂದು ಸರ ಧರಿಸಿರುವ ಶ್ರೀಯಾ ಹಳ್ಳಿ ಹೆಂಗಸಿನ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂಬ ಸುಳಿವನ್ನು ನೀಡಿದಂತಿದೆ. ಪೋಸ್ಟರ್ ನೋಡಿದ ಸಿನಿಪ್ರೇಮಿಗಳು ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ ಸಿನಿಮಾ ಎನ್ನುತ್ತಿದ್ದಾರೆ.

‘ಗಮನಂ ಸಿನಿಮಾವು ಸಾಮಾನ್ಯ ಕರ್ಮಷಿಯಲ್ ಸಿನಿಮಾಗಳಂತೆ ಅಲ್ಲ. ನಿಜಜೀವನದ ಕಥೆಯಾಧಾರಿತ ವಿಭಿನ್ನ ಪರಿಕಲ್ಪನೆಯುಳ್ಳ ಸಿನಿಮಾ’ ಎಂಬ ಸುಳಿವನ್ನು ನೀಡಿದೆ ಚಿತ್ರತಂಡ.

ಮಹಿಳಾಕೇಂದ್ರಿತ ಸಿನಿಮಾವಾದ ’ಗಮನಂ’ ಗೆ ಸುಜನಾ ರಾವ್‌ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇಳಯರಾಜ್ ಸಂಗೀತದ ಸಾರಥ್ಯ ವಹಿಸಿದ್ದಾರೆ. ಸಿನಿಮಾದ ಶೂಟಿಂಗ್ ಕೆಲಸಗಳು ಈಗಾಗಲೇ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಷ್ಟೇ ಬಾಕಿ ಉಳಿದಿವೆ.

ಸಿನಿಮಾದ ಇತರ ಪಾತ್ರ ವರ್ಗಗಳ ಬಗ್ಗೆ ಇನ್ನೂ ಅಧೀಕೃತ ಮಾಹಿತಿ ಹೊರಬಂದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು