ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗರುಡಗಮನ ವೃಷಭ ವಾಹನ’ ಜುಲೈ 4ಕ್ಕೆ ತೆರೆಗೆ

Last Updated 5 ಫೆಬ್ರುವರಿ 2021, 8:09 IST
ಅಕ್ಷರ ಗಾತ್ರ

ರಾಜ್‌ ಬಿ. ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ‘ಗರುಡಗಮನ ವೃಷಭ ವಾಹನ’ ಜುಲೈ 4ರಂದು ಬಿಡುಗಡೆ ಆಗಲಿದೆ. ಮಂಗಳೂರಿನ ಭೂಗತಲೋಕ, ರೌಡಿಸಂ ವಿಷಯ ಸಂಬಂಧಿಸಿದ ಕಥಾವಸ್ತುವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಮೈಸೂರಿನಲ್ಲಿ ಈ ಚಿತ್ರ ಸೆಟ್ಟೇರಿದೆ. ಮಂಗಳೂರು ಭಾಗದ ಭೂಗತ ಲೋಕದ ವಿಷಯ ಬಲ್ಲವರಿಗೆ ಅಥವಾ ಸುದ್ದಿಗಳನ್ನು ಕೇಳುತ್ತಿದ್ದವರಿಗೆ ಈ ಸಿನಿಮಾ ಹೆಚ್ಚು ಆಪ್ತವಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಇದರಲ್ಲಿ ರಾಜ್‌ ಹಾಗೂ ರಿಷಬ್‌ ಷೆಟ್ಟಿ ಪ್ರಧಾನ ಪಾತ್ರದಲ್ಲಿ ಇದ್ದಾರೆ. ಶೀರ್ಷಿಕೆಯೇ ಹೇಳುವಂತೆ ಗರುಡ ಗಮನ ವೃಷಭ ವಾಹನ ಎಂದರೆ ವಿಷ್ಣು ಹಾಗೂ ಶಿವನ ಪಾತ್ರಗಳ ಸಂಗಮ. ಇಲ್ಲಿ ಭೂಗತ ಲೋಕಕ್ಕೆ ಪ್ರವೇಶಿಸಿದ ರೌಡಿಗಳಿಬ್ಬರಲ್ಲಿ ಒಬ್ಬ ವಿಷ್ಣುವಿನ ಗುಣ ಹೊಂದಿರುವವನು. ಅಂದರೆ ಎಂಥ ಪರಿಸ್ಥಿತಿಯನ್ನೂ ಶಾಂತ ಚಿತ್ತದಿಂದ ನಿಭಾಯಿಸಬಲ್ಲವನು. ಯಾರನ್ನು ಹೇಗೆ ನಿರ್ವಹಿಸಬೇಕು ಎಂಬ ಕೌಶಲ ಗೊತ್ತಿರುವವನು. ಇನ್ನೊಬ್ಬ ತನ್ನ ಕೃತ್ಯಗಳಲ್ಲಿ ನಿಯಂತ್ರಣವೇ ಇಲ್ಲದವನು. ಅಂದರೆ ಶಿವನ ಲಯಕಾರಕ ಗುಣಗಳನ್ನು ಆವಾಹಿಸಿಕೊಂಡವನು. ಹೀಗೆ ಇವರಿಬ್ಬರ ಕಥೆಯೇ ಗರುಡಗಮನ ವೃಷಭ ವಾಹನ ಎಂದಿದೆ ಚಿತ್ರತಂಡ.

ಕಥೆ ಸಂಪೂರ್ಣ ಮಂಗಳೂರು ಪ್ರದೇಶವನ್ನು ಆವರಿಸಿದೆ. ಅಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಕಥೆ ಹೆಣೆಯಲಾಗಿದೆಯಂತೆ. ಗೋಪಾಲಕೃಷ್ಣ ದೇಶಪಾಂಡೆ ಅವರಿಗೂ ಚಿತ್ರದಲ್ಲಿ ಮುಖ್ಯಪಾತ್ರ ಇದೆ. ಪ್ರಕಾಶ್‌ ತೂಮಿನಾಡ್‌ ಹಾಗೂ ಕೆಲವು ಹೊಸ ಮುಖಗಳೂ ಈ ಚಿತ್ರದಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT