ಸೋಮವಾರ, ಡಿಸೆಂಬರ್ 5, 2022
26 °C

ಚಿರಂಜೀವಿ ಗಾಡ್‌ಫಾದರ್‌ಗೆ ಟ್ವಿಟರ್‌ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೆಗಾಸ್ಟಾರ್‌ ಚಿರಂಜೀವಿ, ಸಲ್ಮಾನ್‌ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಗಾಡ್‌ಫಾದರ್‌’ ಇಂದು ತೆರೆ ಕಂಡಿದೆ. ಮೋಹನ್‌ಲಾಲ್‌ ಅಭಿನಯದ ಮಲಯಾಳದ ‘ಲೂಸಿಫರ್‌’ ಚಿತ್ರದ ರಿಮೇಕ್‌ ಆಗಿರುವ ಗಾಡ್‌ಫಾದರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಟ್ವಿಟರ್‌ನಲ್ಲಿ ಈ ಚಿತ್ರ ಟ್ರೆಂಡ್‌ ಆಗಿದ್ದು, ಟಿಕೆಟ್‌ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ರಿಮೇಕ್‌ ಆದರೂ ನಿರ್ದೇಶಕ ಮೋಹನ್‌ ರಾಜ್‌ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಮೂಲ ಚಿತ್ರ ಲೂಸಿಫರ್‌ಗಿಂತಲೂ ಗಾಡ್‌ಫಾದರ್ ಅದ್ಭುತವಾಗಿದೆ ಎಂಬ ಅಭಿಪ್ರಾಯವನ್ನು ಬಹುತೇಕರು ಹಂಚಿಕೊಂಡಿದ್ದಾರೆ.

ಸಿನಿಮಾ ತುಸು ದೀರ್ಘವೆನಿಸಿದರೂ, ಎಲ್ಲ ಕಡೆಯಲ್ಲೂ ನೋಡಿಸಿಕೊಂಡು ಹೋಗುತ್ತದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ನಿರ್ದೇಶಕರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲು ಬೇಕಾದ ಎಲ್ಲ ಅಂಶಗಳನ್ನು ಹೊಂದಿದೆ ಎಂದು ಅಭಿಮಾನಿಗಳು ಟ್ವೀಟ್‌ ಮಾಡುತ್ತಿದ್ದಾರೆ.

ಚಿರಂಜೀವಿ ನಟನೆ ಇನ್ನೊಂದು ಮಟ್ಟದಲ್ಲಿದೆ. ಸಲ್ಮಾನ್‌ ಖಾನ್‌ ಪಾತ್ರಕ್ಕೆ ತಕ್ಕಂತೆ ಮಿಂಚಿದ್ದಾರೆ. ಸ್ಟಾಲಿನ್‌ ಬಳಿಕ ಮೆಗಾಸ್ಟಾರ್‌ಗೆ ದೊಡ್ಡ ಸಿನಿಮಾ ಎಂಬ ಮಾತುಗಳು ಕೇಳಿಬಂದಿವೆ. ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿದ್ದು ಮೊದಲೇ ದಿನವೇ ದೊಡ್ಡ ಮಟ್ಟದ ಗಳಿಕೆ ನಿರೀಕ್ಷೆಯಿದೆ.

ನಟ ಪೃಥ್ವಿರಾಜ್‌ ನಿರ್ದೇಶಿಸಿ, ಮೋಹನ್‌ಲಾಲ್‌ ಅಭಿನಯದ ಲೂಸಿಫರ್‌ ಮಲಯಾಳದಲ್ಲಿ ದೊಡ್ಡ ಹಿಟ್‌ ಚಿತ್ರವೆನಿಸಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು