ಗೋಲ್ಡನ್ ಸ್ಟಾರ್ ಗಣೇಶ್ ಕಿರಿಯ ಸಹೋದರ ಮಹೇಶ್ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಮತ್ತೊಬ್ಬ ಸಹೋದರ ಉಮೇಶ್ ‘ನಾನೇ ರಾಜ’ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಅದುಸೂರಜ್ಕೃಷ್ಣ ಹೆಸರಿನಿಂದ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಮನರಂಜನೆ, ಸಾಹಸ ಮತ್ತು ಪ್ರೀತಿಯ ಕಥೆ ಸಿನಿಮಾದ ಹೂರಣ. ಶೇ.50ರಷ್ಟು ಚಿತ್ರೀಕರಣ ಬನ್ನೂರು, ಉಳಿದ ಭಾಗ ಬೆಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಮೂರು ಹಂತದಲ್ಲಿ ನಡೆದಿದೆ.ಸದ್ಯ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ನವೆಂಬರ್ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.1984ರಲ್ಲಿ ತೆರೆಕಂಡ ರವಿಚಂದ್ರನ್ ಮೊದಲ ಚಿತ್ರವುಇದೇ ಶೀರ್ಷಿಕೆಯಿಂದ ಕೂಡಿತ್ತು.
ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೂರಜ್ಕೃಷ್ಣ, ‘ಎಲ್ಲವನ್ನು ಅಣ್ಣನಿಂದ ಕಲಿತಿದ್ದೇನೆ. ಏನೇ ಕ್ರೆಡಿಟ್ ಬಂದರೂ ಅಣ್ಣನಿಗೆಸಲ್ಲುತ್ತದೆ. ಹಳ್ಳಿ ಹುಡುಗನಾಗಿ ನಟಿಸಿದ್ದೇನೆ’ ಎಂದರು.

ಸೂರಜ್ಕೃಷ್ಣಗೆ ನಾಯಕಿಯಾಗಿ ಸೋನಿಕಾ ಗೌಡ ನಟಿಸಿದ್ದಾರೆ. ‘ಪಟ್ಟಣದಿಂದ ಹಳ್ಳಿಗೆ ಬಂದಾಗ ಅಲ್ಲಿ ನಡೆಯುವ ಘಟನೆಗಳಿಗೆ ನಾನೇ ಹೊಣೆಯಾಗಿರುತ್ತಾನೆ’ ಎಂದು ಸೋನಿಕಾಗೌಡ ತಮ್ಮ ಪಾತ್ರದ ಕಿರುಪರಿಚಯ ಮಾಡಿದರು.ಶಿಷ್ಯನ ಚಿತ್ರಕ್ಕೆ ಶುಭ ಹಾರೈಸಿದ ಹಿರಿಯ ನಿರ್ದೇಶಕ ಭಾರ್ಗವ, ‘ಟ್ರೇಲರ್ ನೋಡಿ ಚಿತ್ರ ನಿರ್ಧರಿಸಬಾರದು. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು’ ಎಂದರು.
ಶ್ರೀನಿವಾಸ ಶಿವಾರ ಅವರು ಚಿತ್ರಕಥೆ ಹೆಣೆಯುವ ಜತೆಗೆ ನಿರ್ದೇಶನವನ್ನು ಮಾಡಿದ್ದಾರೆ.

ಇದನ್ನೂ ಓದಿ...ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ ' ಗೀತಾ'

‘ರಾಜ ಅಜ್ಜಿಯ ಮುದ್ದಿನ ಮೊಮ್ಮಗನಾಗಿದ್ದು, ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಾನೆ. ನಾಯಕಿ ಹಾಗೂ ಆಕೆಯ ಮನೆಯವರು ಸಂಕಷ್ಟಕ್ಕೆ ಸಿಲುಕಿದಾಗ ಸಹಾಯ ಮಾಡಲು ಹೋಗಿ ತಾನೆ ಕಷ್ಟಕ್ಕೆ ಸಿಲುಕುತ್ತಾನೆ. ಆನಂತರ ಮುಂದೇನು ಎಂಬುದೇ ಚಿತ್ರದ ತಿರುಳು.ಈಗಾಗಲೇ 35 ದಿನ ಚಿತ್ರೀಕರಣ ಮಾಡಲಾಗಿದೆ’ ಎನ್ನುತ್ತಾರೆ ಶಿವಾರ. ಈ ಸಿನಿಮಾಕ್ಕೆನಿರ್ಮಾಪಕ ಎಲ್.ಆನಂದ್ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ಎಂ.ಎಸ್.ಉಮೇಶ್, ಮಾಲತಿಶ್ರೀ,ಕುರಿ ಪ್ರತಾಪ್, ಟೆನಿಸ್ ಕೃಷ್ಣ, ಹಂಸರಾಜ್, ಆರ್ಯ, ದತ್ತ, ಲಕ್ಷ್ಮೀ, ಮೋಹನ್ ಜುನೇಜ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.