ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ ಚಿತ್ರ ‘ಸಖತ್’ನ ಟೀಸರ್ ಇದೇ 24ರಂದು ಬಿಡುಗಡೆಯಾಗಲಿದ್ದು, ಟೀಸರ್ನಲ್ಲಿ ‘ಸಖತ್ ಬಾಲು’ ಎಂಬ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ.

ಸಿಂಪಲ್ ಸುನಿ, ಗಣೇಶ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಟೈಟಲ್ನಿಂದಲೇಸಾಕಷ್ಟು ನಿರೀಕ್ಷೆಯನ್ನು ಸಿನಿಮಾ ಹುಟ್ಟಿಸಿದೆ. ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಗಣೇಶ್ ನಟಿಸಿದ್ದಾರೆ. ‘ಈ ಪಾತ್ರ ನನಗೆ ಸವಾಲಾಗಿದೆ. ಯಾವತ್ತೂ ತೆರೆಯ ಮೇಲೆ ಕಾಣಿಸದೇ ಇರುವ ಗಣೇಶ್ನನ್ನು ತೆರೆಯ ಮೇಲೆ ತೋರಿಸಬೇಕು. ಯಾವತ್ತೂ ಮಾಡದೇ ಇರುವ ಪಾತ್ರವಿದು. ನಮ್ಮ ಮೇಲೆ ನಂಬಿಕೆ ಇಟ್ಟು ಬರುವ ನಿರ್ದೇಶಕರು ಊಹಿಸಿದಕ್ಕಿಂತಲೂ ಚೆನ್ನಾಗಿ ನಾವು ಆ ಪಾತ್ರ ನಿಭಾಯಿಸಬೇಕು. ‘ಸಖತ್’ ಸಿನಿಮಾ ಬಹಳ ಮನರಂಜನೆ ಹಾಗೂ ಥ್ರಿಲ್ ನೀಡಲಿದೆ’ ಎಂದು ಪ್ರಜಾವಾಣಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಗಣೇಶ್ ಹೇಳಿದ್ದರು.

ಚಿತ್ರದ‘ಪ್ರೇಮಕ್ಕೆ ಕಣ್ಣಿಲ್ಲಾ’ ಎಂಬ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.ಸದ್ಯ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ.ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಟಿವಿ ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಗಣೇಶ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಚಿತ್ರಕ್ಕೆ ನಿಶಾ ವೆಂಕಟ್ ಕೋನನ್ಕಿ, ಭರಾಟೆ ಖ್ಯಾತಿಯ ಸುಪ್ರಿತ್ ಬಂಡವಾಳ ಹೂಡಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಸದ್ಯ ತಲ್ಲೀನವಾಗಿದೆ. ನವೆಂಬರ್ ಅಂತ್ಯದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.