ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುರು ಶಿಷ್ಯರು’ ಸಿನಿಮಾ ಸೆ. 23ಕ್ಕೆ ಬಿಡುಗಡೆ

Last Updated 18 ಸೆಪ್ಟೆಂಬರ್ 2022, 6:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಟ ಶರಣ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅಭಿನಯದ, ಜಡೇಶ್‌ ಕುಮಾರ್ ಕಂಪಿ ನಿರ್ದೇಶನದ ‘ಗುರು ಶಿಷ್ಯರು’ ಸಿನಿಮಾ ಸೆ. 23ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರಕ್ಕಾಗಿ ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಚಿತ್ರತಂಡ, ಸಿನಿಮಾ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿತು.

‘ಪಾಶ್ಚಾತ್ಯ ಆಟಗಳಿಂದಾಗಿ ನಮ್ಮ ನೆಲದ ಆಟಗಳು ಮಹತ್ವ ಕಳೆದುಕೊಂಡಿವೆ. ನಮ್ಮ ನೆಲದ ಕೊಕ್ಕೊ ಆಟವನ್ನು ಕೇಂದ್ರವಾಗಿಟ್ಟುಕೊಂಡು ಭಾವನಾತ್ಮಕ ಎಳೆಗಳೊಂದಿಗೆ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಸಿನಿಮಾದಿಂದ ನಮ್ಮ ನೆಲದ ಆಟಗಳ ಬಗ್ಗೆ ಒಂದಿಷ್ಟು ಜಾಗೃತಿ ಮೂಡಿದರೆ ನಮ್ಮ ಚಿತ್ರತಂಡದ ಶ್ರಮ ಸಾರ್ಥಕವಾಗಲಿದೆ’ ಎಂದು ನಾಯಕ ನಟ ಶರಣ್ ಹೇಳಿದರು.

‘ಮನೋಹರ ಎಂಬ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದಲ್ಲಿ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ನನಗೆ ಪಾಠ ಹೇಳಿಕೊಟ್ಟ ಗುರುಗಳಿಂದಿಡಿದು ನಾನು ಕೆಲಸ ಮಾಡಿದ ನೂರಕ್ಕೂ ಹೆಚ್ಚು ಸಿನಿಮಾಗಳ ನಿರ್ದೇಶಕರು ಕೂಡ ನನಗೆ ಗುರುಗಳೇ. ಅಲ್ಲದೆ, 95ರಲ್ಲಿ ತೆರೆ ಕಂಡಿದ್ದ ‘ಗುರು ಶಿಷ್ಯರು’ ಸಿನಿಮಾ ಇಂದಿಗೂ ನನಗೆ ಸ್ಪೆಷಲ್’ ಎಂದರು.

ನಟಿ ನಿಶ್ವಿಕಾ ನಾಯ್ಡು ಮಾತನಾಡಿ, ‘ಸೂಜಿ ಪಾತ್ರ ನನ್ನದು. ಹಳ್ಳಿ‌ ಮೇಷ್ಟ್ರಿಗೆ ಲೈನ್ ಹೊಡೆಯುವ ಈ ಪಾತ್ರ ಸವಾಲಿನದ್ದೂ ಆಗಿತ್ತು. ಕೊಕ್ಕೊ ಕ್ರೀಡೆ ಕುರಿತು ಕನ್ನಡದ ಮೊದಲ ಸಿನಿಮಾವಾದ ಗುರು ಶಿಷ್ಯರು ಇತಿಹಾಸ ಸೃಷ್ಟಿಸಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಹಾಸ್ಯ ನಟ ಮಹಾಂತೇಶ ಹಿರೇಮಠ, ‘95ರ ಕಾಲಘಟ್ಟದ ಸಿನಿಮಾ ಕಥೆಯು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಸಿನಿಮಾ ನೋಡಿ ಹೊರಬಂದವರಿಗೆ ಹಮ್ಮೆ ಎನಿಸುತ್ತದೆ’ ಎಂದರು.

ನಟ ಶರಣ್ ಚಿತ್ರದ ಹಾಡನ್ನು ಹಾಡಿ, ಹೆಜ್ಜೆ ಹಾಕಿ ರಂಜಿಸಿದರು. ಕೊಕ್ಕೊ ಕ್ರೀಡಾಪಟುಗಳಾಗಿ ನಟಿಸಿರುವ ಏಕಾಂತ್, ರಕ್ಷಕ್, ಮಣಿಕಂಠ ನಾಐಕ್, ಸೂರ್ಯ, ಹರ್ಷಿತ್ ಹಾಗೂ ಹೃದಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT