ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಬಿಟ್ಸ್‌: ಗುರುರಾಜ ಕುಲಕರ್ಣಿ ಹೊಸ ಸಿನಿಮಾ

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

‘ಅಮೃತ್ ಅಪಾರ್ಟ್‌ಮೆಂಟ್‌’, ‘ದ ಜಡ್ಜ್‌ಮೆಂಟ್’ ಸಿನಿಮಾಗಳನ್ನು ನಿರ್ದೇಶಿಸಿದ್ದ ಗುರುರಾಜ ಕುಲಕರ್ಣಿ (ನಾಡಗೌಡ) ಮತ್ತೊಂದು ಸಿನಿಮಾ ಪ್ರಾರಂಭಿಸಿದ್ದಾರೆ. ಭಾರತದಿಂದ ಆಸ್ಕರ್‌ ಅಂಗಳ ಪ್ರವೇಶಿಸಿರುವ  ‘ಲಾಪತ ಲೇಡಿಸ್’ ಚಿತ್ರದ ಬರಹಗಾರ ಸೋನು ಆನಂದ್ ಈ ಚಿತ್ರದ ಬರವಣಿಗೆ ಕೆಲಸದಲ್ಲಿ ಭಾಗಿಯಾಗಿದ್ದು, ಈ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ.

‘ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಥೆ ಈಗಾಗಲೇ ಪೂರ್ಣಗೊಂಡಿದ್ದು, ಪ್ರೀಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಐದು ಸಿನಿಮಾಗಳನ್ನು ನಿರ್ಮಿಸಿ, ಎರಡು ಚಿತ್ರ ನಿರ್ದೇಶಿಸಿದ್ದೇನೆ. ಮುಂದೆ ಯಾವ ರೀತಿಯ ಸಿನಿಮಾಗಳನ್ನು ಮಾಡಬೇಕೆಂದು ತಿಳಿಯಲು ಆಡಿಯನ್ಸ್ ಸರ್ವೆ ಮಾಡಿದ್ದೆವು. ಅದರ ಆಧಾರದ ಮೇಲೆ ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್‌ ಶೈಲಿಯ ಚಿತ್ರ ಮಾಡಲು ಮುಂದಾಗಿದ್ದೇವೆ. ಥ್ರಿಲ್ಲರ್‌ನೊಂದಿಗೆ ಭಾವನಾತ್ಮಕ ಕಥಾ ಹಂದರವುಳ್ಳ ಚಿತ್ರವಿದು’ ಎಂದಿದ್ದಾರೆ ಗುರುರಾಜ ಕುಲಕರ್ಣಿ.  

‘ಬರಹಗಾರ ಸೋನು ಆನಂದ್, ಹಿಂದಿ, ಮರಾಠಿ ಮತ್ತು ಭೋಜ್‌ಪುರಿಯಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಅವರು ಈ ಚಿತ್ರದ ಸಂಭಾಷಣೆ ಬರೆಯುತ್ತಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರ ಕಥೆಗಾರರನ್ನು ತಂಡದಲ್ಲಿ ಸೇರಿಸಿಕೊಂಡು ಎಲ್ಲ ಭಾಷೆಗಳಿಗೂ ಸರಿಹೊಂದುವ ಚಿತ್ರ ನಿರ್ಮಾಣದ ಗುರಿಯಿದೆ. ದೀಪಾವಳಿ ಹಬ್ಬದ ವೇಳೆಗೆ ಈ ಸಿನಿಮಾ ಸೆಟ್ಟೇರಲಿದ್ದು, ನನ್ನದೇ G9 ಕಮ್ಯುನಿಕೇಷನ್ ಮೀಡಿಯಾ ಮತ್ತು ಎಂಟರ್‌ಟ್ರೇನ್‌ಮೆಂಟ್‌ ಅಡಿಯಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದೆ’ ಎಂದು ಅವರು ಹೇಳಿದ್ದಾರೆ. 

ಶೀಘ್ರದಲ್ಲಿಯೇ ಈ ಸಿನಿಮಾದ ಟೈಟಲ್ ಮತ್ತು ಕಲಾವಿದರು, ತಂತ್ರಜ್ಞರ ಬಗ್ಗೆ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT