ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕಥೆ
2019ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಅದೀಬ್ ಅಖ್ತರ್ ಅವರ ‘ಪಂಜರ’ ಕಥೆಯನ್ನೇ ಹಂಸಲೇಖ ಅವರು ‘ಓಕೆ’ ಮೂಲಕ ತೆರೆಗೆ ತರುತ್ತಿದ್ದಾರೆ. ಸಿನಿಮಾದಲ್ಲಿ ನಟ ಕಿಶೋರ್ ನಟಿಸುತ್ತಿದ್ದಾರೆ. ‘ಭ್ರೂಣ ಹತ್ಯೆ ವಿಷಯ ಈ ಕಥೆಯಲ್ಲಿದೆ. ಇದರ ಬಗ್ಗೆ ಜಾಗೃತಿ ಮೂಡಿಸಿ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ಕೊಡಬೇಕು ಅನ್ನುವ ಆಶಯದಲ್ಲಿ ಆರಿಸಿಕೊಂಡಿದ್ದೇನೆ. ಇದನ್ನು ಸಿನಿಮಾ ಮೂಲಕ ತೆರೆ ಮೇಲೆ ತರುವ ರೀತಿ ಹೊಸದಾಗಿರುತ್ತದೆ. ಸಂಗೀತ ಈ ಸಿನಿಮಾದ ಮುಖ್ಯ ಅಂಶವಾಗಿರುತ್ತದೆ’ ಎಂದಿದ್ದಾರೆ ಹಂಸಲೇಖ.