ಶುಕ್ರವಾರ, ಜೂಲೈ 3, 2020
22 °C

ಅನುಷ್ಕಾ ಶರ್ಮಾ ಜನ್ಮದಿನ: 32ನೇ ವಸಂತಕ್ಕೆ ಕಾಲಿಟ್ಟ ಕೊಹ್ಲಿ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ಬೇಡಿಕೆಯ ನಟಿ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿಯ ಮುದ್ದಿನ ಪತ್ನಿ ಅನುಷ್ಕಾ ಶರ್ಮಾಗೆ ಇಂದು (ಮೇ 1) 32ನೇ ವರ್ಷದ ಜನ್ಮದಿನ ಸಂಭ್ರಮ.
 
ಕೊಹ್ಲಿ ಫ್ಯಾನ್ಸ್‌ ಸೇರಿದಂತೆ ಅನುಷ್ಕಾ ಅಭಿಮಾನಿಗಳು ಹಾಗೂ ಸಿನಿಮಾರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಿದ್ದಾರೆ.

ಅನುಷ್ಕಾ ಸಹೋದರ ಕರಣೇಶ್‌ ಶರ್ಮಾ ಬಾಲ್ಯದ ಫೋಟೊಗಳನ್ನು ಶೇರ್ ಮಾಡುವ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ.

 
 
 
 

 
 
 
 
 
 
 
 
 

Happy Happy Birthday.. Keep the kid in you alive always ❤️❤️❤️❤️

A post shared by Karnesh (@kans26) on

ಕೊರೊನಾ ವೈರಸ್‌ ಪರಿಣಾಮ ಅನುಷ್ಕಾ ಜನ್ಮದಿನವನ್ನು ಮನೆಯಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಬಣ್ಣದ ಲೋಕಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿವೆ. ಅವರು 2008ರಲ್ಲಿ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಪಿಕೆ, ಸುಲ್ತಾನ್‌, ಸಂಜು ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಅನುಷ್ಕಾ ನಟಿಸಿದ್ದಾರೆ.  ಜಿರೋ ಸಿನಿಮಾದ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು