ಶುಕ್ರವಾರ, ಮೇ 20, 2022
27 °C

32ನೇ ವಸಂತಕ್ಕೆ ಕಾಲಿಟ್ಟ ವರುಣ್ ತೇಜ್‌: ಚಿರಂಜೀವಿ ಸೇರಿ ಗಣ್ಯರಿಂದ ಶುಭ ಹಾರೈಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲುಗು ನಟ ವರುಣ್‌ ತೇಜ್‌ ಅವರು ಇಂದು (ಬುಧವಾರ) 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ, ನಾಗಬಾಬು, ಸಾಯಿ ತೇಜ್‌, ವೈಷ್ಣವ್ ತೇಜ್ ಸೇರಿದಂತೆ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವರುಣ್‌ಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

‘ವರುಣ್ ತೇಜ್‌ಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ಮಗ ವರುಣ್‌ ತೇಜ್‌ ಜೊತೆಗಿರುವ ಫೋಟೊಗಳನ್ನು ಹಂಚಿಕೊಂಡಿರುವ ನಾಗ ಬಾಬು, ‘ಯಾವುದೇ ಪೋಷಕರಿಗೆ ಪರಿಪೂರ್ಣತೆಯ ಭಾವ ನಿಮ್ಮಂತಹ ಮಗುವಿನ ರೂಪದಲ್ಲಿ ಬರುತ್ತದೆ. ಪದಗಳಲ್ಲಿ ವರ್ಣಿಸಲಾಗದ ತೃಪ್ತಿಯ ಭಾವನೆ ನೀವು ನಮಗೆ ನೀಡಿದ್ದೀರಿ. ನಮ್ಮ ಜೀವನ ಇನ್ನಷ್ಟು ಸುಂದರವಾಗಿರಲಿ. ಜನ್ಮದಿನದ ಶುಭಾಶಯಗಳು ಪ್ರಿಯ ವರುಣ್ ತೇಜ್’ ಎಂದು ಟ್ವೀಟ್ ಮಾಡಿದ್ದಾರೆ.

‘ಜನ್ಮದಿನದ ಶುಭಾಶಯಗಳು ಭಾವಾ, ಈ ವರ್ಷ ನೀವು ಬಯಸಿದಂತೆ ಎಲ್ಲವೂ ನೆರವೇರಲಿ ಎಂದು ಹಾರೈಸುತ್ತೇನೆ. ಜತೆಗೆ, ಆಯುರಾರೋಗ್ಯ, ಯಶಸ್ಸು, ಪ್ರೀತಿ ಲಭಿಸಲೆಂದು ಎಂದು ಪ್ರಾರ್ಥಿಸುತ್ತೇನೆ. ಲವ್ ಯು ಬಾಬು’ ಎಂದು ಸಾಯಿ ತೇಜ್ ಟ್ವೀಟ್ ಮಾಡಿದ್ದಾರೆ.  

ಕಿರಣ್ ಕೊರ್ರಪಾಟಿ ನಿರ್ದೇಶನದ 'ಗನಿ' ಚಿತ್ರದಲ್ಲಿ ವರುಣ್ ತೇಜ್‌ ನಟಿಸುತ್ತಿದ್ದು, ಸಾಯಿ ಮಂಜ್ರೇಕರ್​ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮಾರ್ಚ್‌ 18ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ವಿಕ್ಟರಿ ವೆಂಕಟೇಶ್, ವರುಣ್ ತೇಜ್, ತಮನ್ನಾ, ಮೆಹ್ರೀನ್ ಅಭಿನಯದ ಎಫ್‌ –3 ಸಿನಿಮಾದ ಚಿತ್ರೀಕರಣವು ಭರದಿಂದ ಸಾಗಿದೆ.

ಓದಿ... ಇದು ಅವಳ ಕೊನೆಯ ಮುತ್ತು: ಸಮನ್ವಿ ಬಗ್ಗೆ ತಾಯಿ ಅಮೃತಾ ರೂಪೇಶ್ ಭಾವುಕ ನುಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು