ಉಪೇಂದ್ರ ಜತೆಗಿನ ಶೂಟಿಂಗ್ ಕ್ಷಣಗಳ ವಿಡಿಯೊ ಹಂಚಿಕೊಂಡ ಹರಿಪ್ರಿಯಾ

ಬೆಂಗಳೂರು: ನಟಿ ಹರಿಪ್ರಿಯಾ ಅವರು ರಿಯಲ್ ಸ್ಟಾರ್ ಉಪೇಂದ್ರ ಜತೆಗೆ ಲಗಾಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದ ಫೋಟೊ ಶೂಟ್ ಸಂದರ್ಭದ ಸನ್ನಿವೇಶವೊಂದನ್ನು ಹರಿಪ್ರಿಯಾ ತಮ್ಮ ಸಾಮಾಜಿಕ ತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತೆರೆಯ ಹಿಂಬದಿಯಲ್ಲಿ ಎಂಬ ಅಡಿಬರಹದೊಂದಿಗೆ ಹರಿಪ್ರಿಯಾ ಈ ಕಿರು ವಿಡಿಯೊ ಪೋಸ್ಟ್ ಮಾಡಿದ್ದು, ಉಪೇಂದ್ರ ಜತೆ ಸಿನಿಮಾದ ಪೋಸ್ಟ್‌ರ್ ಫೋಟೊಗೆ ಹರಿಪ್ರಿಯಾ ಪೋಸ್ ಕೊಟ್ಟಿದ್ದಾರೆ.
ಅಲ್ಲದೆ, ಈ ವಿಡಿಯೊಗೆ ಉಪೇಂದ್ರ ಅಭಿನಯದ ಜನಪ್ರಿಯ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎನ್ನುವ ಹಿನ್ನೆಲೆ ಸಂಗೀತವನ್ನು ಕೂಡ ಹರಿಪ್ರಿಯಾ ಸೇರಿಸಿ, ಪೋಸ್ಟ್ ಮಾಡಿದ್ದಾರೆ.
ಅತಿಯಾ ಶೆಟ್ಟಿ ಜತೆ ಕಾಣಿಸಿಕೊಂಡ ಕ್ರಿಕೆಟಿಗ ಕೆ ಎಲ್ ರಾಹುಲ್
ಹರಿಪ್ರಿಯಾ ಪೋಸ್ಟ್‌ಗೆ ಉಪೇಂದ್ರ ಅಭಿಮಾನಿಗಳು ಕೂಡ ಲೈಕ್ ಮತ್ತು ಕಮೆಂಟ್ ಮಾಡಿದ್ದು, ‘ಸೂಪರ್’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.