ಬುಧವಾರ, ಜೂನ್ 3, 2020
27 °C

ಹರೀಶ್‌ಗೆ ಚಿರಂಜೀವಿ ಜೊತೆ ಕೆಲಸ ಮಾಡುವಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್‌ನ ಮೆಗಾ ಹೀರೊಗಳಿಗೆ ಆ್ಯಕ್ಷನ್‌ ಕಟ್‌ ಹೇಳುವ ಮೂಲಕ ‘ಮೆಗಾ ಡೈರೆಕ್ಟರ್’ ಎನ್ನಿಸಿಕೊಂಡಿದ್ದಾರೆ ನಿರ್ದೇಶಕ ಹರಿಶಂಕರ್‌.

‘ಗೊದ್ದಲಕೊಂಡ ಗಣೇಶ್’ ಸಿನಿಮಾದ ಯಶಸ್ಸಿನ ಬಳಿಕ ಹರೀಶ್ ಅವರು, ಪವನ್‌ ಕಲ್ಯಾಣ್ ನಟನೆಯ ಸಿನಿಮಾಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ಈ ಮೆಗಾ ಡೈರೆಕ್ಟರ್‌ಗೆ ಚಿರಂಜೀವಿ ಹಾಗೂ ರಾಮ್‌ಚರಣ್ ಅವರೊಟ್ಟಿಗೆ ಸಿನಿಮಾ ಮಾಡುವ ಹಂಬಲವಿದೆಯಂತೆ.

ಇತ್ತೀಚೆಗೆ ರಾಮ್‌ ಚರಣ್ ಮಲಯಾಳದ ‘ಲೂಸಿಫರ್’ ಚಿತ್ರದ‌ ತೆಲುಗು ರಿಮೇಕ್‌ಗೆ ಮನಸ್ಸು ಮಾಡಿದ್ದರು. ಇದನ್ನು ನಿರ್ದೇಶಿಸಲು ಹರಿಶಂಕರ್‌ ಅವರನ್ನು ಸಂಪರ್ಕಿಸಿದ್ದರು. ಆದರೆ ಸದ್ಯಕ್ಕೆ ಪವನ್‌ ಕಲ್ಯಾಣ್ ಸಿನಿಮಾದಲ್ಲಿ ಹರೀಶ್ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಈ ಅವಕಾಶವನ್ನು ತಳ್ಳಿ ಹಾಕಿದ್ದರು ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿತ್ತು.

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಹರೀಶ್, ‘ನನಗೆ ಈ ರೀತಿ ಯಾವುದೇ ಆಫರ್‌ಗಳು ಬಂದಿಲ್ಲ. ಒಂದು ವೇಳೆ ಅವಕಾಶ ಬಂದರೆ ಖಂಡಿತ ಅಂತಹ ಅವಕಾಶವನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತೇನೆ. ನನಗೆ ಮೆಗಾಸ್ಟಾರ್ ಜೊತೆಗೆ ಕೆಲಸ ಮಾಡಬೇಕೆಂಬುದು ಹಲವು ದಿನಗಳ ಕನಸು. ಹಾಗಿರುವಾಗ ನಾನೇಕೆ ಈ ಅವಕಾಶವನ್ನು ಕಳೆದುಕೊಳ್ಳಲಿ’ ಎಂದು ಹೇಳಿದ್ದಾರೆ.

‘ಪವನ್ ಕಲ್ಯಾಣ್ ನಟನೆಯ ತಮ್ಮ ಮುಂದಿನ ಚಿತ್ರ ರಾಜಕೀಯ ಹಿನ್ನೆಲೆಯುಳ್ಳದ್ದು ಎಂಬ ವಿಷಯವನ್ನು ಅಲ್ಲಗೆಳೆದಿರುವ ಅವರು, ‘ಗಬ್ಬರ್‌ ಸಿಂಗ್’ ಸಿನಿಮಾದಂತೆ ಇದು ಪಕ್ಕಾ ಕಮರ್ಷಿಯಲ್ ಎಂಟರ್‌ಟ್ರೈನರ್ ಚಿತ್ರ. ನಾನು ವೆಬ್ ಸೀರಿಸ್ ಒಂದನ್ನು ಮಾಡುವ ಯೋಚನೆಯಲ್ಲಿದ್ದೇನೆ’ ಎನ್ನುವ ಮೂಲಕ ಬಿಡುವಿನ ಸಮಯವನ್ನು ವ್ಯರ್ಥ ಮಾಡುತ್ತಿಲ್ಲ’ ಎಂದು ವಿವರಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.