ನವದೆಹಲಿ: ಹೋಳಿ ಹಬ್ಬವನ್ನು ಚಪ್ರಿಗಳ (ಕಿಡಿಗೇಡಿಗಳ) ಹಬ್ಬ ಎಂದು ಕರೆದ ಆರೋಪದ ಮೇಲೆ ಬಾಲಿವುಡ್ ನಿರ್ದೇಶಕಿ, ನಿರ್ಮಾಪಕಿ ಫರ್ಹಾ ಖಾನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಫರ್ಹಾ ಖಾನ್ ವಿರುದ್ಧ ಯೂಟ್ಯೂಬರ್ ಹಿಂದೂಸ್ಥಾನಿ ಬಾವ್ ಅಲಿಯಾಸ್ ವಿಕಾಸ್ ಫಾಠಕ್ ದೂರು ದಾಖಲಿಸಿದ್ದಾರೆ. ಫರ್ಹಾ ಖಾನ್ ಅವರು ಹಿಂದೂಗಳ ಹಬ್ಬವಾದ ಹೋಳಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಿಂದೂಸ್ಥಾನಿ ಬಾವ್ ಬೇಸರ ಹೊರಹಾಕಿದ್ದಾರೆ.

ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿರುವ ಫರ್ಹಾ ಖಾನ್, ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಎಲ್ಲ ಕಿಡಿಗೇಡಿಗಳ (ಚಪ್ರಿ) ಬಹಳ ಮೆಚ್ಚಿನ ಹಬ್ಬವೆಂದರೆ ಅದು ಹೋಳಿ ಹಬ್ಬ ಎಂದಿದ್ದರು. ಹೋಳಿ ಹಬ್ಬದಲ್ಲಿ ಯುವಕರು ಯುವತಿಯರ ಮೇಲೆ ಬಣ್ಣ ಎಸೆಯುವುದು, ಅವರನ್ನು ಕಾಡಿಸುವುದು ಮಾಡುತ್ತಾರೆ. ಜತೆಗೆ, ಸಾರ್ವಜನಿಕವಾಗಿ ಮದ್ಯಪಾನ ಮಾಡುವುದು ಸೇರಿದಂತೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಹೇಳಿದ್ದರು.

ಫರ್ಹಾ ಖಾನ್ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.