ಬುಧವಾರ, ಡಿಸೆಂಬರ್ 7, 2022
23 °C

Krrish 4: ಮತ್ತೆ ತೆರೆಯ ಮೇಲೆ ಸೂಪರ್ ಹೀರೊ ಅವತಾರದಲ್ಲಿ ಹೃತಿಕ್ ರೋಷನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಸೂಪರ್ ಹೀರೊ ಪಾತ್ರದ ಮೂಲಕ ಕ್ರಿಶ್ ಸರಣಿ ಚಿತ್ರಗಳಲ್ಲಿ ಮಿಂಚಿದ್ದ ನಟ ಹೃತಿಕ್ ರೋಷನ್ ಮತ್ತೊಮ್ಮೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ರಿಶ್ ಚಿತ್ರಕ್ಕೆ 15 ವರ್ಷ ತುಂಬಿದ ಬೆನ್ನಲ್ಲೇ ಹೃತಿಕ್ ರೋಷನ್, ಕ್ರಿಶ್ 4 ಸಿನಿಮಾ ಕುರಿತು ಘೋಷಿಸಿದ್ದಾರೆ.

ಈಗಾಗಲೇ ಕ್ರಿಶ್ ಸರಣಿಯಲ್ಲಿ ಮೂರು ಚಿತ್ರಗಳು ಬಂದಿವೆ. ಸೂಪರ್ ಹೀರೋ ಪಾತ್ರದಲ್ಲಿ ನಟಿಸಿರುವ ಹೃತಿಕ್ ರೋಷನ್, ಈ ಬಾರಿಯೂ ನಾಯಕನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಕ್ರಿಶ್ 4 ಕುರಿತು ಕಿರು ವಿಡಿಯೊ ಒಂದನ್ನು ಹಂಚಿಕೊಂಡಿರುವ ಹೃತಿಕ್ ರೋಷನ್, ಭವಿಷ್ಯದಲ್ಲಿ ಏನಾಗುವುದೋ ಕಾದು ನೋಡೋಣ ಎಂದಿದ್ದಾರೆ.

ಹೃತಿಕ್ ರೋಷನ್ ತಂದೆ ರಾಕೇಶ್ ರೋಶನ್ ಈ ಮೊದಲು ಬಿಡುಗಡೆಯಾದ ಕ್ರಿಶ್ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದರು.

ಕ್ರಿಶ್ ಚಿತ್ರ 15 ವರ್ಷ ಪೂರೈಸಿದ ಸಂಭ್ರಮವನ್ನು ನಟಿ ಪ್ರಿಯಾಂಕ ಚೋಪ್ರಾ ಕೂಡ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು