ಬುಧವಾರ, ಆಗಸ್ಟ್ 21, 2019
25 °C

ಸೈನ್ಸ್‌ ಫಿಕ್ಷನ್‌ ಥ್ರಿಲ್ಲರ್‌ ಶಾರುಕ್‌ ವಿಲನ್

Published:
Updated:

‘2.0’ ಸಿನಿಮಾ ಖ್ಯಾತಿಯ ನಿರ್ದೇಶಕ ಶಂಕರ್‌ ಷಣ್ಮುಗಂ ಸದ್ಯ ಸಿನಿಮಾಗಳ ಚಿತ್ರಕತೆ ಹಾಗೂ ಪೂರ್ವತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸೈನ್ಸ್‌ ಫಿಕ್ಷನ್‌ ಥ್ರಿಲ್ಲರ್‌ ಸಿನಿಮಾದ ಚಿತ್ರಕತೆಯನ್ನು ಸಿದ್ಧಪಡಿಸಿದ್ದು, ಈ ಸಿನಿಮಾದದಲ್ಲಿ ನಟ ಶಾರುಕ್‌ ಖಾನ್‌ ವಿಲನ್‌ ಆಗಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಂತೆ ಶಂಕರ್‌ ಅವರು ಶಾರುಕ್‌ ಅವರನ್ನು ಭೇಟಿ ಮಾಡಿ ಈಗಾಗಲೇ ಮಾತುಕತೆ ನಡೆಸಿದ್ದಾರೆ. 

ಈ ಮೊದಲು ಈ ಪಾತ್ರದಲ್ಲಿ ಹೃತಿಕ್‌ ರೋಷನ್‌ ಅವರು ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಹೃತಿಕ್‌ ಬಳಿ ಕತೆ ಬಗ್ಗೆ ಚರ್ಚೆ ಸಹ ನಡೆಸಿದ್ದರು. ಆದರೆ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಸತ್ತೆ ಪೆ ಸತ್ತಾ’ ಸಿನಿಮಾವನ್ನು ಈಗಾಗಲೇ ಹೃತಿಕ್‌ ಒಪ್ಪಿಕೊಂಡಿದ್ದಾರೆ. ಎರಡು ಸಿನಿಮಾಗಳ ಡೇಟ್ಸ್‌ ಹೊಂದಿಕೆಯಾಗದೇ ಇರುವುದರಿಂದ ಅವರ ಸ್ಥಾನಕ್ಕೆ ಶಾರುಕ್‌ ಆಯ್ಕೆಯಾಗಿದ್ದಾರೆ. 

ಈ ಹಿಂದೆ ಯಾವ ಸಿನಿಮಾಗಳಲ್ಲೂ ಶಂಕರ್‌ ಹಾಗೂ ಶಾರುಕ್‌ ಒಟ್ಟಿಗೆ ಕೆಲಸ ಮಾಡಿಲ್ಲ. ಚಿತ್ರಕತೆ, ನಿರ್ದೇಶನ, ಕಲಾವಿದರ
ಆಯ್ಕೆಯಿಂದ ಈ ಚಿತ್ರವು ನಿರೀಕ್ಷೆಯನ್ನು ಹುಟ್ಟುಹಾಕಿದೆ. 

ಈ ಚಿತ್ರದಲ್ಲಿ ಖ್ಯಾತ ನಟ ಜಾಕಿ ಚಾನ್‌, ತಮಿಳು ನಟ ವಿಜಯ್‌, ಚೀನಾ ಕಲಾವಿದೆ ಲಿಬಿಂಗ್‌ಬಿಂಗ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. 

Post Comments (+)