ಗುರುವಾರ , ಮೇ 26, 2022
26 °C

ಸೀಟ್‌ ಬೆಲ್ಟ್‌ ಸಂದೇಶ ಸಾರಲು ‘ಅಖಂಡ’ ಚಿತ್ರದ ದೃಶ್ಯ ಬಳಸಿದ ಹೈದರಾಬಾದ್ ಪೊಲೀಸರು

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಸಿನಿಮಾದ ದೃಶ್ಯವೊಂದನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಶೀಟ್‌ ಬೆಲ್ಟ್‌ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಹೈದರಾಬಾದ್‌ ಪೊಲೀಸರು ಮುಂದಾಗಿದ್ದಾರೆ.

ಬೊಯಪಾಟಿ ಶ್ರೀನು ನಿರ್ದೇಶನದ 'ಅಖಂಡ' ಸಿನಿಮಾ ಡಿ.2ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಕೃಷ್ಣ - ಪ್ರಜ್ಞಾ ಜೈಸ್ವಾಲ್ ನಟನೆಗೆ ಅಭಿಮಾನಿಗಳು ಬಹುಪರಾಕ್​ ಎಂದಿದ್ದಾರೆ.

ಬಾಲಕೃಷ್ಣ - ಪ್ರಜ್ಞಾ ಒಟ್ಟಿಗೆ ಕಾರಿನಲ್ಲಿ ತೆರಳುತ್ತಿರುವ ವೇಳೆ ಏಕಾಏಕಿ ಬ್ರೇಕ್‌ ಹಾಕಿದಾಗ ಶೀಟ್‌ ಬೆಲ್ಟ್‌ ಧರಿಸದ ಪ್ರಜ್ಞಾ ಅವರ ತಲೆ ಮುಂಭಾಗದ ವಿಂಡ್‌ಶೀಲ್ಡ್‌ಗೆ ತಗುಲಲು ಮುಂದಾಗುತ್ತದೆ. ಇದೇ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ಬಾಲಕೃಷ್ಣ, ಆಕೆಗೆ ಸೀಟ್ ಬೆಲ್ಟ್ ಧರಿಸುವಂತೆ ಒತ್ತಾಯಿಸಿ, ‘ಜೀವನ ಅಮೂಲ್ಯ’ ಎಂದು ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಇದೀಗ ಸಿನಿಮಾದ ಈ ದೃಶ್ಯವನ್ನು ಹೈದರಾಬಾದ್ ಪೊಲೀಸರು #WearASeatBelt ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜತೆಗೆ ಚಿತ್ರತಂಡಕ್ಕೂ ಧನ್ಯವಾದ ಸಲ್ಲಿಸಿದ್ದಾರೆ.

ಓದಿ... ಅಮೃತಾ ಹುಟ್ಟುಹಬ್ಬ: ಮುದ್ದಿನ ಮಗಳ ಫೋಟೊ ಹಂಚಿಕೊಂಡು ಶುಭ ಹಾರೈಸಿದ ನಟ ಪ್ರೇಮ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು