ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿತಾರಾ ಅವಿವಾಹಿತೆಯಾಗಿಯೇ ಉಳಿದಿದ್ದೇಕೆ?

Last Updated 11 ಮೇ 2020, 19:30 IST
ಅಕ್ಷರ ಗಾತ್ರ

ನಟಿ ಸಿತಾರಾ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಆಕೆ ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರ ‘ಹಾಲುಂಡ ತವರು’. ಎರಡು ವರ್ಷದ ಹಿಂದೆ ತೆರೆಕಂಡ ‘ಅಮ್ಮ ಐ ಲವ್‌ ಯು’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರ ಅಮ್ಮನಾಗಿ ನಟಿಸಿದ್ದರು.

ದಶಕಗಳ ಕಾಲ ಹೀರೊಯಿನ್‌ ಆಗಿ ಮಿಂಚಿದ್ದ ಅವರು ಈಗ ಪೋಷಕ ಪಾತ್ರಗಳಿಗೆ ಸೀಮಿತರಾಗಿದ್ದಾರೆ. ಪರದೆ ಮೇಲೆ ಹೀರೊಗಳ ಪತ್ನಿಯ ಪಾತ್ರಕ್ಕೆ ಜೀವ ತುಂಬುವ ಆಕೆ ನಿಜಜೀವನದಲ್ಲಿ ಒಂಟಿ. ಆಕೆಗೀಗ 47 ವರ್ಷವಾಗಿದ್ದು, ಅವಿವಾಹಿತೆಯಾಗಿಯೇ ಉಳಿದಿದ್ದಾರೆ. ತಾವು ಅವಿವಾಹಿತೆಯಾಗಿ ಉಳಿದ ಬಗ್ಗೆ ಮಾಧ್ಯಮಗಳೊಟ್ಟಿಗೆ ನಡೆದ ಸಂವಾದದಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಸಿತಾರಾ ಅವರ ತಂದೆಯ ಹೆಸರು ಪರಮೇಶ್ವರನ್‌ ನಾಯರ್. ಅವರು ಕೇರಳದ ವಿದ್ಯುಚ್ಚಕ್ತಿ ಮಂಡಳಿಯಲ್ಲಿ ಎಂಜಿನಿಯರ್‌ ಆಗಿದ್ದರಂತೆ. ಅಮ್ಮ ಕೂಡ ಅದೇ ಮಂಡಳಿಯಲ್ಲಿ ಅಧಿಕಾರಿಯಾಗಿದ್ದರು. ಅಪ್ಪನೇ ಅವರ ಪಾಲಿನ ಸರ್ವಸ್ವವಾಗಿದ್ದರು. ಸಿತಾರಾ ಹದಿಹರೆಯದಲ್ಲಿದ್ದ ಇದ್ದಾಗ ಅಪ್ಪ ಮೃತಪಟ್ಟಿದ್ದರಿಂದ ಮದುವೆಯ ಆಲೋಚನೆಯಿಂದ ಅವರು ದೂರ ಸರಿದರಂತೆ.

‘ಅಪ್ಪ ನನ್ನ ಜೀವನದ ಗುರುವಾಗಿದ್ದರು. ಅಂತಹ ವ್ಯಕ್ತಿಯನ್ನೇ ಕಳೆದುಕೊಂಡಾಗ ನನ್ನ ಬದುಕಿಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿಲ್ಲ ಎಂದು ನಿರ್ಧರಿಸಿದೆ. ಹಾಗಾಗಿಯೇ, ಸಪ್ತಪದಿ ತುಳಿಯಲು ಮನಸ್ಸು ಮಾಡಲಿಲ್ಲ. ಇಂದಿಗೂ ನನಗೆ ಮದುವೆ ಬಗ್ಗೆ ಆಸಕ್ತಿಯೇ ಇಲ್ಲ’ ಎಂದು ಹೇಳಿದ್ದಾರೆ ಸಿತಾರಾ.

1999ರಲ್ಲಿ ತೆರೆಕಂಡ ‘ಸೂಪರ್‌ ಸ್ಟಾರ್’ ರಜನಿಕಾಂತ್‌ ನಾಯಕರಾಗಿದ್ದ ‘ಪಡಿಯಪ್ಪ’ ಚಿತ್ರದಲ್ಲಿ ‘ತಲೈವ’ನ ತಂಗಿಯಾಗಿ ಅವರು ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ ವಿಷ್ಣುವರ್ಧನ್‌ ಜೊತೆಗೆ ನಟಿಸಿದ ‘ಹಾಲುಂಡ ತವರು’ ಚಿತ್ರದಲ್ಲಿನ ಅವರ ಮನೋಜ್ಞ ಅಭಿನಯ ಚಿತ್ರರಸಿಕರ ಮನಗೆದ್ದಿತ್ತು. ಸಿತಾರಾ ಅವರ ನಟನೆ ಬೆಳ್ಳಿತೆರೆಗಷ್ಟೇ ಸೀಮಿತಗೊಂಡಿಲ್ಲ. ತಮಿಳು, ತೆಲುಗು ಮತ್ತು ಮಲಯಾಳದ ಧಾರಾವಾಹಿಗಳಲ್ಲೂನಟಿಸಿದ್ದು, ಕಿರುತೆರೆ ಪ್ರೇಕ್ಷಕರ ಹೃದಯವನ್ನೂ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT