ಸೋಮವಾರ, ಮೇ 23, 2022
30 °C

ದಕ್ಷಿಣ ಏಷ್ಯಾದ ಗಣ್ಯರ ಪಟ್ಟಿಯಲ್ಲಿ ನಟ ಪ್ರಭಾಸ್‌ಗೆ ಮೊದಲ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ ಮೂಲದ ಈಸ್ಟರ್ನ್‌ ಐ  ವಾರಪತ್ರಿಕೆಯು ‘ಬಾಹುಬಾಲಿ’ ಖ್ಯಾತಿಯ ತೆಲುಗು ನಟ ಪ್ರಭಾಸ್‌ ಅವರನ್ನು 2021ನೇ ಸಾಲಿನಲ್ಲಿ ದಕ್ಷಿಣ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿರುವ ಗಣ್ಯ ವ್ಯಕ್ತಿ ಎಂದು ಹೆಸರಿಸಿದೆ. 

‘ಬಿಲ್ಲಾ’, ‘ಡಾರ್ಲಿಂಗ್‌’ ಮತ್ತು ‘ಬಾಹುಬಲಿ’ ಸಿನಿಮಾಗಳಲ್ಲಿನ ತಮ್ಮ ಅಭಿನಯಕ್ಕೆ ಹೆಸರಾದ ಪ್ರಭಾಸ್‌ ಅವರು ಏಷ್ಯಾದ 50 ಗಣ್ಯರ ಪಟ್ಟಿಗೆ ಆಯ್ಕೆಯಾಗಿದ್ದು, ಈ ಪಟ್ಟಿ ‘ಈಸ್ಟರ್ನ್‌ ಐ’ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾಗಲಿದೆ. 

ಸಿನಿಮಾ, ಕಿರುತೆರೆ, ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಜಾಲತಾಣಗಳ ಜಾಗತಿಕ ತಾರೆಗಳ ಪೈಕಿ ಪ್ರಭಾಸ್‌ ಉನ್ನತ ಸ್ಥಾನಗಳಿಸಿದ್ದಾರೆ. 

ಈ ಪಟ್ಟಿಯಲ್ಲಿ ಬ್ರಿಟಿಷ್‌ ಪಾಕಿಸ್ತಾನಿ ನಟ, ಸಂಗೀತಕಾರ ರಿಜ್‌ ಅಹಮದ್‌ ಅವರು ದ್ವಿತೀಯ, ನಟಿ ಪ್ರಿಯಾಂಕಾ ಚೋಪ್ರಾ ಅವರು ಮೂರನೇ ಸ್ಥಾನ ಹಾಗೂ ಭಾರತೀಯ–ಅಮೆರಿಕನ್‌ ಮಿಂಡಿ ಕಲಿಂಗ್‌ ಅವರು ನಾಲ್ಕನೇ ಸ್ಥಾನ, ಗಾಯಕಿ ಶ್ರೇಯಾ ಘೋಷಾಲ್ ಅವರು ಐದನೇ ಸ್ಥಾನ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು