ಶುಕ್ರವಾರ, ಅಕ್ಟೋಬರ್ 22, 2021
29 °C

ಇಂಡಿಯಾಸ್‌ ಸ್ಪೇಸ್‌ ಒಡೆಸ್ಸಿ: ಡಿಸ್ಕವರಿ ಪ್ಲಸ್‌ನಲ್ಲಿ ಇಸ್ರೊ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಂಡಿಯಾಸ್‌ ಸ್ಪೇಸ್‌ ಒಡೆಸ್ಸಿ (ಸಾಕ್ಷ್ಯಚಿತ್ರ ಸರಣಿ)

ನಿರ್ಮಾಣ: ಮಿಡಿಟೆಕ್ ಸ್ಟುಡಿಯೋಸ್

ಪ್ರಸಾರ: ಡಿಸ್ಕವರಿ ಪ್ಲಸ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 60 ವರ್ಷಗಳ ಪ್ರಯಾಣವನ್ನು ದಾಖಲಿಸಿದೆ ಡಿಸ್ಕವರಿ ಪ್ಲಸ್‌. ‘ಇಂಡಿಯಾಸ್‌ ಸ್ಪೇಸ್‌ ಒಡೆಸ್ಸಿ’ ಹೆಸರಿನಲ್ಲಿ ಕಾರ್ಯಕ್ರಮ ನಿರ್ಮಾಣವಾಗಿದ್ದು ಅ. 7ರಿಂದ ಡಿಸ್ಕವರಿ ಪ್ಲಸ್‌ನಲ್ಲಿ ಪ್ರಸಾರ ಆರಂಭವಾಗಿದೆ.

ಈ ಸರಣಿಗೆ ಚಿತ್ರನಟ ಆರ್‌. ಮಾಧವನ್‌ ಹಿಂದಿಯಲ್ಲಿ ವಿವರಣೆ ನೀಡಿದ್ದಾರೆ. ತನ್ನ ಪ್ರತಿ ಯಶಸ್ಸಿನ ಹಿಂದೆ ಇಸ್ರೊ ಸಂಸ್ಥೆ ಎದುರಿಸಿದ ಕಠಿಣ ಸವಾಲುಗಳು, ಪರಿಸ್ಥಿತಿಗಳನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ವಿಜ್ಞಾನಿ ಡಾ.ಹೋಮಿ ಜೆ. ಬಾಬಾ ಮತ್ತು ಡಾ.ವಿಕ್ರಂ ಸಾರಾಬಾಯಿ ಅವರಿಂದ ಆರಂಭಗೊಂಡ ಇಸ್ರೊ ಬೆಳವಣಿಗೆಯ ಮೆಟ್ಟಿಲುಗಳು ಈ ಸರಣಿಯಲ್ಲಿ ಚಿತ್ರಿಣವಾಗಿವೆ.

ಮಿಡಿಟೆಕ್ ಸ್ಟುಡಿಯೋಸ್ ಈ ಸರಣಿಯನ್ನು ನಿರ್ಮಿಸಿದೆ. ಇಸ್ರೊದ ವಿವಿಧ ತಜ್ಞರು ಹಾಗೂ ಬಾಹ್ಯಾಕಾಶ ಇತಿಹಾಸಕಾರರು ಮತ್ತು ಸಂಶೋಧಕರು, ಇಸ್ರೊದ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ಅವರ ಮಾತುಗಳು ಸರಣಿಯಲ್ಲಿವೆ. ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಪ್ರೊ.ಸತೀಶ್ ಧವನ್ ಅವರ ಸಾಧನೆಯ ದಾಖಲೆಗಳೂ ಇವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು