ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸೂರ್ಯವಂಶಿ' ಟ್ವೀಟ್: ನಟ ಅಕ್ಷಯ್ ಕುಮಾರ್‌ಗೆ ಬುದ್ದಿ ಹೇಳಿದ ಐಪಿಎಸ್ ಅಧಿಕಾರಿ!

Last Updated 26 ಸೆಪ್ಟೆಂಬರ್ 2021, 10:38 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರೋಹಿತ್ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’ಸಿನಿಮಾ ಈ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಅಕ್ಷಯ್ ಕುಮಾರ್, ಅಜಯ್‌ ದೇವಗನ್, ರಣವೀರ್‌ ಸಿಂಗ್, ಕತ್ರಿನಾ ಕೈಫ್ಕಾಂಬಿನೇಷನ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಅಕ್ಟೋಬರ್‌ 22ರಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಅಕ್ಷಯ್‌ ಕುಮಾರ್‌ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು ಸಿನಿಮಾ ಚಿತ್ರೀಕರಣದ ಫೋಟೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು.

ಈ ಫೋಟೊಬಗ್ಗೆ ಐಪಿಎಸ್ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ‘ಎಸ್‌ಪಿಗಳ ಎದುರು ಇನ್ಸ್‌ಪೆಕ್ಟರ್ ಕುಳಿತಿದ್ದಾರೆ. ಎಸ್‌ಪಿಗಳು ನಿಂತಿದ್ದಾರೆ. ಸಾಮಾನ್ಯವಾಗಿ ಹೀಗೆ ಇರುವುದಿಲ್ಲ.ಹೀಗೆ ತೋರಿಸಿರುವುದು ಸರಿಯಲ್ಲ’ ಎಂಬ ಅರ್ಥದಲ್ಲಿ ಹರಿಯಾಣದಐಪಿಎಸ್ ಅಧಿಕಾರಿ ಆರ್‌ಕೆ ವಿಜ್ ಎನ್ನುವರು ಟ್ವೀಟ್ ಮಾಡಿದ್ದರು.

ಅನೇಕ ನೆಟ್ಟಿಗರು ಅಕ್ಷಯ್ ಕುಮಾರ್ ಹಾಕಿದ್ದ ಈ ಫೋಟೊ ಸರಿಯಾದುದ್ದಲ್ಲ ಎಂದು ಟ್ರೋಲ್ ಮಾಡಿದ್ದರು. ಅಲ್ಲದೇ ಈ ಟ್ವೀಟ್ ವೈರಲ್ ಆಗಿತ್ತು ಕೂಡ.

ಇದಕ್ಕೆ ಸ್ವತಃ ಅಕ್ಷಯ್ ಕುಮಾರ್ ಅವರು ಆರ್‌ಕೆ ವಿಜ್ ಅವರಿಗೆ ಟ್ವೀಟ್ ಮಾಡಿ, ‘ಸರ್ ಅದು ಶೂಟಿಂಗ್ ವೇಳೆ ತೆಗೆದ ಫೋಟೊ. ಶಿಷ್ಟಾಚಾರ ಅನುಸರಿಸಿಲ್ಲ. ಕ್ಷಮಿಸಿ, ನಾವು ಕಲಾವಿದರು ಮಾತನಾಡುತ್ತಿದ್ದಾಗ ತೆಗೆದ ಫೋಟೊ’ಎಂದು ಹೇಳಿದ್ದಾರೆ.

ಆದರೆ, ಈ ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಮನಬಂದಂತೆ ಸಿನಿಮಾದವರು ವರ್ತಿಸುತ್ತಾರೆ ಎಂದು ಹಲವುರು ಆರ್‌ಕೆ ವಿಜ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT