ಶುಕ್ರವಾರ, ಆಗಸ್ಟ್ 6, 2021
23 °C

ಪ್ರಿಯಕರನೊಂದಿಗೆ ಆಪ್ತವಾಗಿರುವ ಚಿತ್ರ ಹಂಚಿಕೊಂಡ ಅಮೀರ್‌ ಖಾನ್‌ ಪುತ್ರಿ ಇರಾ

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ನಟ ಅಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ‘ಬಾಯ್‌ ಫ್ರೆಂಡ್‌‌‘ ಫೋಟೊವನ್ನು ಹಂಚಿಕೊಡಿದ್ದಾರೆ.

ಇರಾ ಖಾನ್‌ ತನ್ನ ‘ಬಾಯ್‌ ಫ್ರೆಂಡ್‌‘ ನೂಪುರ್ ಶಿಖಾರೆ ಅವರ ಜತೆ ಸಲುಗೆಯಿಂದ ಇರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು 30 ಸಾವಿರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. ಮುದ್ದಾದ ಜೋಡಿ ಎಂದು ಹಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇರಾ ಖಾನ್‌ ತನ್ನ ಫಿಟ್ನೆಸ್ ತರಬೇತುದಾರ ನೂಪುರ್ ಶಿಖಾರೆ ಅವರನ್ನು ಪ್ರೀತಿ ಮಾಡುತ್ತಿದ್ದಾರೆ. ಈ ವಿಚಾರವನ್ನು ಕಳೆದ ಪ್ರೇಮಿಗಳ ದಿನಾಚರಣೆಯಂದು ಬಹಿರಂಗಪಡಿಸಿದ್ದರು. ಸದ್ಯ ಇಬ್ಬರು ಡೇಟಿಂಗ್‌ನಲ್ಲಿದ್ದಾರೆ.

ಇರಾ ಖಾನ್‌ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಿಂತ ನನಗೆ ರಂಗಭೂಮಿ ಆಸಕ್ತಿಯ ಕ್ಷೇತ್ರ ಎಂದು ಅವರು ಹಲವು ಸಲ ಹೇಳಿದ್ದಾರೆ. ಹೆಚ್ಚು ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಬೇಕು ಎಂಬುದು ಅವರ ಕನಸು. ಈಗಾಗಲೇ ಸಾಮಾಜಿಕ ನಾಟಕವೊಂದನ್ನು ನಿರ್ದೇಶನ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು