ಮಂಗಳವಾರ, ಜನವರಿ 21, 2020
29 °C

ಮಂಜು ಜೊತೆ ಸ್ಕ್ರೀನ್‌ ಶೇರ್ ಮಾಡ್ತಾರಾ ದಿಲೀಪ್‌...?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೇರಳದ ಚಿತ್ರಮಂದಿರಗಳಲ್ಲಿ ನಟಿ ಮಂಜು ವಾರಿಯರ್‌ ಅಭಿನಯದ ‘ಪ್ರದಿ ಪೂವನ್‌ಕೊಯಿ’ ಚಿತ್ರ ಮತ್ತು ದಿಲೀಪ್‌ನ ‘ಮೈ ಸಾಂಟಾ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿವೆ. ತಮ್ಮ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ಬಗ್ಗೆಯೂ ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ, ಕುತೂಹಲವನ್ನು ವ್ಯಕ್ತವಾಗಿತ್ತು.

ಈಚೆಗೆ ಸಿನಿಮಾದ ಪ್ರಚಾರಕ್ಕೆಂದು ದಿಲೀಪ್‌ ಟಿ.ವಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಮುಂದೆ ಮಂಜು ವಾರಿಯರ್‌ ಜೊತೆ ನಟಿಸುತ್ತಿರಾ ಎಂಬ ಪ್ರಶ್ನೆಗೆ ದಿಲೀಪ್‌ ‘ಚಿತ್ರಕ್ಕೆ ಅಗತ್ಯವಾಗಿದ್ದಲ್ಲಿ ಖಂಡಿತಾ ಅಭಿನಯಿಸುತ್ತೇನೆ’ ಎಂದಿದ್ದಾರೆ.

ಒಂದು ಕಾಲದಲ್ಲಿ ಮಾಲಿವುಡ್‌ ಸ್ಟಾರ್‌ ಜೋಡಿಗಳಾಗಿ ಗುರುತಿಸಿಕೊಂಡಿದ್ದವರು  ದಿಲೀಪ್‌ ಮತ್ತು ಮಂಜು ವಾರಿಯರ್‌. ಬಳಿಕ ದಿಲೀಪ್‌ ಅವರನ್ನೇ ಮದುವೆಯಾಗಿದ್ದ ಅವರು, ಸಿನಿ ಜೀವನದಿಂದ ದೂರವಾಗಿದ್ದರು. ಅವರಿಬ್ಬರು 14 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನದ ಮೂಲಕ ಪೂರ್ಣವಿರಾಮ ಹಾಕಿದ್ದರು.

ಇದೇ ವಿಷಯವಾಗಿ ಮಾತನಾಡಿದ ದಿಲೀಪ್‌, ‘ಮಂಜು ವಾರಿಯರ್‌ ಜೊತೆ ಅಭಿನಯಿಸುತ್ತೇನೆ. ಆ ಪಾತ್ರಕ್ಕೆ ಅವರೇ ಸೂಕ್ತವಾದ್ದಲ್ಲಿ ಖಂಡಿತ ಅಭಿನಯಿಸುತ್ತೇನೆ. ನನ್ನ ಮತ್ತು ಮಂಜು ನಡುವೆ ಯಾವುದೇ ಮನಸ್ತಾಪ ಇಲ್ಲ’ ಎಂದು ಹೇಳಿದ್ದಾರೆ. 

ದಿಲೀಪ್‌ ಮೇಲೆ ನಟಿಯೊಬ್ಬರ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ದಿಲೀಪ್, ‘ಅವರ ಮೇಲೆ ನನಗೆ ತುಂಬಾ ಗೌರವವಿದೆ. ಅವರ ಜೊತೆಗೆ ನಾನು ಹಲವು ಚಿತ್ರದಲ್ಲಿ ನಟಿಸಿದ್ದೇನೆ’ ಎಂದಿದ್ದಾರೆ. ಹಾಗೇನೇ ಅವರು ಯಶಸ್ಸು ಕಾಣಲಿ ಎಂದೂ ಶುಭ ಹಾರೈಸಿದ್ದಾರೆ. 

ಪ್ರತಿಕ್ರಿಯಿಸಿ (+)